ಫೆಬ್ರವರಿ 26ರಂದು ಪಾಣೆಮಂಗಳೂರು-ನೆಹರು ನಗರದಲ್ಲಿ ಧಾರ್ಮಿಕ ಪ್ರವಚನ
ವಿಟ್ಲ, ಜ.21: ಪಾಣೆಮಂಗಳೂರು ಸಮೀಪದ ನೆಹರು ನಗರದ ನೂರುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ದಶಮಾನೋತ್ಸವದ ಅಂಗವಾಗಿ ಏಕದಿನ ಪ್ರಭಾಷಣ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮವು ಫೆಬ್ರವರಿ 26ರಂದು ಮಗ್ರಿಬ್ ನಮಾಝ್ ಬಳಿಕ ನೆಹರು ನಗರ ಶಾಲಾ ಮೈದಾನದಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು.
ಸೈಯದ್ ಸಮೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶಿರ್ವಚನಗೈಯುವರು. ಅಂತಾರಾಷ್ಟ್ರೀಯ ವಾಗ್ಮಿ ಅಲ್-ಹಾಫಿಳ್ ಸಿರಾಜುದ್ದೀನ್ ಅಲ್-ಖಾಸಿಮಿ ಪ್ರಿಯಪೆಟ್ಟ ಉಮ್ಮ ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈಯುವರು.
ನಂದಾವರ ಕೇಂದ್ರ ಜುಮಾ ಮಸೀದಿಯ ಖತೀಬ್ ಹಾಜಿ ಎನ್.ಎಚ್.ಆದಂ ಫೈಝಿ, ನೆಹರು ನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್.ಅಬ್ದುಲ್ ಹಮೀದ್, ಸದರ್ ಮುಅಲ್ಲಿಂ ಫಕ್ರುದ್ದೀನ್ ದಾರಿಮಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ನೂರುಲ್ ಹುದಾ ಯಂಗ್‌ಮೆನ್ಸ್ ಅಧ್ಯಕ್ಷ ಹಬೀಬ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ