ರಾಷ್ಟ್ರಮಟ್ಟದ ಬಸವರತ್ನ ಪ್ರಶಸ್ತಿಗೆ ಧರಣೇಂದ್ರ ಕುಮಾರ್ ಆಯ್ಕೆ
Update: 2017-01-21 16:04 IST
ಬೆಂಗಳೂರು, ಜ.21: ಜಿ.ಪಂ. ಸದಸ್ಯ ಪಿ.ಧರಣೇಂದ್ರ ಕುಮಾರ್ ಅವರನ್ನು ಜ್ಞಾನಜ್ಯೋತಿ ಬಸವೇಶ್ವರ ಫೌಂಡೇಶನ್ ಸಹಯೋಗದಲ್ಲಿ ನೀಡಲ್ಪಡುವ 2017ನೆ ಸಾಲಿನ ರಾಷ್ಟ್ರಮಟ್ಟದ ಬಸವರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಫೆ.10ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರುವಿನಲ್ಲಿ ಜರಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಧರಣೇಂದ್ರ ಅವರ ರಾಜಕೀಯ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.