×
Ad

​ಬೋಳೂರು, ಬೆಂಗರೆಯಲ್ಲಿ ಬೋಟು ನಿರ್ಮಾಣ ಜೆಟ್ಟಿ: ಶಾಸಕ ಲೋಬೊ

Update: 2017-01-21 18:06 IST

ಮಂಗಳೂರು, ಜ.21: ನಗರದ ಬೋಳೂರಿನಲ್ಲಿ ದೊಡ್ಡ ಬೋಟು ಮತ್ತು ಬೆಂಗರೆಯಲ್ಲಿ ನಾಡ ದೋಣಿ ನಿರ್ಮಾಣ ಜೆಟ್ಟಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.

ನಗರದ ದಕ್ಕೆಯ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ದ.ಕ.ಜಿಪಂ ಮೀನುಗಾರಿಕೆ ಇಲಾಖೆ ವತಿಯಿಂದ ಮಹಿಳಾ ಮೀನು ಮಾರಾಟಗಾರರಿಗೆ ಸುರಕ್ಷಿತ ಸಲಕರಣೆ ಉಪಯೋಗ ಬಗ್ಗೆ ಶನಿವಾರ ನಡೆದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರರ ಬೇಡಿಕೆಯಂತೆ ಬೋಟುಗಳ ಸಾಧ್ಯತಾ ಪತ್ರ ನೀಡಿಕೆ, ಮಹಿಳೆಯರಿಗೆ ಸ್ವಚ್ಛತೆ ಕಾಪಾಡಲು ವಿವಿಧ ಸಲಕರಣೆಗಳ ವಿತರಣೆ ಹಾಗು 1 ಕೋ.ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಮಾಡಲಾಗುವುದು. ಶಾಸಕರ ನಿಧಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ 3ನೆ ಹಂತದ ಬಂದರಿಗೆ ಸೇತುವೆ, ಬಂದರು ಹರಾಜು ಪ್ರಾಂಗಣ ದುರಸ್ತಿ, ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯ ದುರಸ್ತಿ ಕಾಮಗಾರಿ ನಡೆಸಲಾಗುವುದು ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಮೀನುಗಾರಿಕೆ ಮತ್ತು ಹಳೆ ಬಂದರು ಪ್ರದೇಶ ಅಭಿವೃದ್ಧಿ ಮಾಡಲಾಗುವುದು ಎಂದು ಜೆ.ಆರ್. ಲೋಬೊ ಹೇಳಿದರು.

ಈ ಸಂದರ್ಭ ಅರ್ಹ ಮೀನುಗಾರರಿಗೆ ಬೋಟ್‌ಗಳ ಸಾಧ್ಯತಾ ಪತ್ರ ವಿತರಣೆ, ಅವಘಡದಲ್ಲಿ ಮೃತ ಮೀನುಗಾರರ ವಾರಸುದಾರರಿಗೆ ಸಂಕಷ್ಟ ಪರಿಹಾರ ನಿಧಿಯಡಿ 2 ಲಕ್ಷ ರೂ. ವಿತರಿಸಲಾಯಿತು.

ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಹೇಶ್ ಕುಮಾರ್, ಬಂದರು ಇಲಾಖೆ ಜಂಟಿ ನಿರ್ದೇಶಕ ಗಣಪತಿ ಭಟ್ ಉಪಸ್ಥಿತರಿದ್ದರು. ಮೀನುಗಾರಿಕೆ ಕಾಲೇಜಿನ ತಜ್ಞರಾದ ಪ್ರೊ.ಲಕ್ಷ್ಮೀಶ ಮತ್ತು ಪ್ರೊ.ನಾರಾಯಣ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಸುಶ್ಮಿತಾ ರಾವ್ ಸ್ವಾಗತಿಸಿದರು. ತಾಲೂಕು ಅಧಿಕಾರಿ ದಿವ್ಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News