×
Ad

ಪಟ್ಟೋರಿಯಲ್ಲಿ ಏಕಾಹ ಭಜನೆ: ದೀಪ ಪ್ರಜ್ವಲನೆ

Update: 2017-01-21 18:15 IST

ಕೊಣಾಜೆ , ಜ.21 : ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ ಕೊಣಾಜೆ ಇದರ ಆಶ್ರಯಲ್ಲಿ 36ನೇ ವರ್ಷದ ಏಕಾಹ ಭಜನಾ ಕಾಯಕ್ರಮವು ಬೆಳಿಗ್ಗೆ ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಉದ್ಘಾಟನೆಗೊಂಡಿತು.

 ಏಕಾಹ ಭಜನೆಯನ್ನು ಕೊಣಾಜೆ ಬೀಡು ತಿರುಮಲೇಶ್ವರ ಭಟ್, ರಘುರಾಮ ಕಾಜವ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರಾದ ಗಂಗಾಧರ, ಕಾರ್ಯದರ್ಶಿ ಮೋಹನ್ ಕಾಟುಕೋಡಿ ಹಾಗೂ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಏಕಾಹ ಭಜನೆಯ ಮಂಗಳೋತ್ಸವವು  ಬೆಳಿಗ್ಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News