ಬಜಾಜ್ ಸಂಸ್ಥೆಯಿಂದ ನೂತನ ಡೊಮಿನರ್ 400 ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಜ.21: ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಅಟೊ ಲಿಮಿಟೆಡ್ ಸಂಸ್ಥೆಯು ನೂತನ ಡೊಮಿನರ್ 400 ಸ್ಪೋರ್ಟ್ಸ್ ಬೈಕ್‌ನ್ನು ಇಂದು ನಗರದ ಹೊರವಲಯದ ಕೊಟ್ಟಾರದಲ್ಲಿರುವ ತನ್ನ ಶೋ ರೂಂನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶೋ ರೂಂನ ಜನರಲ್ ಮ್ಯಾನೇಜರ್ ಸುದರ್ಶನ್ ಭಟ್, ಸರ್ವಿಸ್ ವಿಭಾಗದ ಡಿಜಿಎಂ ಗುರುಪ್ರಸಾದ್, ಆಡಳಿತ ನಿರ್ದೇಶಕ ಅರ್ಜುನ್ ರಾವ್, ಸೇಲ್ಸ್ ಮ್ಯಾನೇಜರ್ ಅಹ್ಮದ್ ಸಿದ್ದೀಕ್ ಮತ್ತು ಅವಿನಾಶ್, ರೈಡರ್ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಈ ನೂತನ ಬೈಕ್ ಬಜಾಜ್‌ನ ಬೈಕ್‌ಗಳಲ್ಲೇ ಗಾತ್ರದಲ್ಲಿ ದೊಡ್ಡದು ಮತ್ತು ಶಕ್ತಿಶಾಲಿಯಾಗಿದೆ. ಫ್ಯೂಲ್ ಇಂಜೆಕ್ಷನ್ ಮತ್ತು ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯೊಂದಿಗೆ 373 ಸಿಸಿ ಟ್ರಿಪಲ್ ಸ್ಪಾರ್ಕ್ ಫೋರ್ ವಾಲ್ವ್ ಡಿಟಿಎಸ್-ಐ ಎಂಜಿನ್ ಹೊಂದಿದೆ. ಈ ಎಂಜಿನ್ ಸರಾಗ ಮತ್ತು ಸಿಕ್ಸ್‌ಸ್ಪೀಡ್ ಟ್ರಾನ್ಸ್‌ಮಿಶನ್ ಮತ್ತು ಸ್ಲಿಪ್ಪರ್ ಕ್ಲಚ್ ಮೂಲಕ ಉತ್ಕೃಷ್ಟ ಲೈನರ್ ನಿರ್ವಹಣೆಯನ್ನು ನೀಡುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಈ ಬೈಕ್ ಎಬಿಎಸ್ ಬೆಲೆ 1,51,973 ರೂ. ಹಾಗೂ ಡಿಸ್ಟ್‌ಬ್ರೇಕ್ ವರ್ಸನ್ ಬೆಲೆ 1,37, 723 ರೂ. ಹೊಂದಿದೆ. ಶೋ ರೂಂನಲ್ಲಿ ವೀಕ್ಷಣೆಗೆ ಹಾಗೂ ಟೆಸ್ಟ್‌ರೈಡ್‌ಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಸೆಂಟ್ರಲೈಸ್ಡ್ ಆನ್‌ಲೈನ್ ಬುಕ್ಕಿಂಗ್‌ನಲ್ಲಿ 9,000 ರೂ. ನೀಡಿ ಬುಕ್ ಮಾಡಬಹುದಾಗಿದ್ದು, ಫೆಬ್ರವರಿ ತಿಂಗಳಲ್ಲಿ ವಿತರಣೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.