×
Ad

ಬ್ರಹ್ಮಾವರ ತಾಲೂಕು ರಚನೆಗೆ ಆಗ್ರಹಿಸಿ ಶಾಸಕರುಗಳ ಕಚೇರಿ ಮುಂದೆ ಭಜನೆ, ಧರಣಿ

Update: 2017-01-21 21:40 IST

ಉಡುಪಿ, ಜ.21: ಘೋಷಿತ ಬ್ರಹ್ಮಾವರ ತಾಲೂಕು ಶೀಘ್ರ ಅನು ಮೋದನೆಯಾಗುವಂತೆ ಆಗ್ರಹಿಸಿ ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿಯು ಶನಿವಾರ ಶಾಸಕರ ಕಚೇರಿಯ ಎದುರು ಭಜನೆಗಳನ್ನು ಹಾಡುವ ಮೂಲಕ ಧರಣಿ ನಡೆಸಿತು.

ಉಡುಪಿ ತಾಲೂಕು ಕಚೇರಿ ಕಟ್ಟಡದಲ್ಲಿರುವ ಉಡುಪಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಕಚೇರಿ ಎದುರು ಧರಣಿ ನಡೆಸಲಾಯಿತು. ಮಟಪಾಡಿ ಚಂಡಿಕಾ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರು ತಾಲೂಕು ಘೋಷಣೆಯ ಭಜನೆಯ ಹಾಡನ್ನು ಹಾಡಿ ಕುಣಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬಾರಕೂರು, ಬ್ರಹ್ಮಾವರ ವ್ಯಾಪ್ತಿಯ ಐವರು ಶಾಸಕರಾದ ಪ್ರಮೋದ್ ಮಧ್ವ ರಾಜ್, ವಿನಯ ಕುಮಾರ್ ಸೊರಕೆ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಕಚೇರಿ ಎದುರು ಎರಡು ದಿನಗಳ ಕಾಲ ಧರಣಿ ನಡೆಸಿ ತಾಲೂಕು ರಚನೆಗೆ ಒತ್ತಾಯಿಸಲಾಗುವುದು ಎಂದರು.

2013ರ ಬಜೆಟ್‌ನಲ್ಲಿ ಬ್ರಹ್ಮಾವರ ತಾಲೂಕು ಘೋಷಣೆ ಮಾಡಲಾಗಿದ್ದು, ಅದಕ್ಕೆ ಈವರೆಗೆ ಅನುಮೋದನೆ ಮತ್ತು ಅನುದಾನ ದೊರೆತಿಲ್ಲ. ಹಲವು ವರ್ಷಗಳಿಂದ ತಾಲೂಕು ಕಚೇರಿಗಳ ನಿರ್ಮಾಣಕ್ಕೆ ಸ್ಥಳವನ್ನು ಕೂಡ ಕಾದಿರಿಸ ಲಾಗಿದೆ. ಎಲ್ಲ ದೃಷ್ಠಿಕೋನದಿಂದಲೂ ಬ್ರಹ್ಮಾವರ ವ್ಯವಸ್ಥಿತ ತಾಲೂಕು ಆಗಲು ಅರ್ಹತೆಯನ್ನು ಹೊಂದಿದೆ. ಆದುದರಿಂದ ಶಾಸಕರುಗಳು ಬ್ರಹ್ಮಾವರವನ್ನು ಖಾಯಂ ತಾಲೂಕು ಆಗಿ ಅನುಮೋದನೆ ಪಡೆಯಲು ಒತ್ತಾಯಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಧರಣಿಯಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಗ್ರಾಪಂ ಸದಸ್ಯರಾದ ಕೋಟಿ ಪೂಜಾರಿ ವಡ್ಡರ್ಸೆ, ಮಹೇಂದ್ರ ಕುಮಾರ್, ಸದಾಶಿವ ಶೆಟ್ಟಿ ಹೇರೂರು, ರಾಮಕೃಷ್ಣ ಹಾರಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News