×
Ad

ಸೈಯದ್ ವೈಲತ್ತೂರ್ ತಂಙಳ್ ನಿಧನ

Update: 2017-01-21 22:20 IST

ಮಂಗಳೂರು, ಜ.21: ಪ್ರಮುಖ ಧಾರ್ಮಿಕ ಮುಖಂಡ, ಸಮಸ್ತ ಉಲಮಾ ಒಕ್ಕೂಟ ಕೇಂದ್ರ ಮುಶಾವರದ ಸದಸ್ಯ ಅಸ್ಸಯದ್ ಯೂಸುಫುಲ್ ಜೀಲಾನಿ ವೈಲತ್ತೂರ್ ತಂಙಳ್ (70) ನಿಧನ ಹೊಂದಿದರು.

ಪ್ರತಿಷ್ಠಿತ ಸುನ್ನೀ ಮರ್ಕಝ್‌ನ ಉಪಾಧ್ಯಕ್ಷ, ಎಸ್‌ವೈಎಸ್ ಸುಪ್ರೀಂ ಕೌನ್ಸಿಲ್ ಸದಸ್ಯ ಮೊದಲಾದ ಹುದ್ದೆಗಳನ್ನು ವಹಿಸಿಕೊಂಡಿದ್ದ ಅವರು, 2018ರ ಜನವರಿ ತಿಂಗಳಲ್ಲಿ ನಡೆಯಲಿರುವ ಮರ್ಕಝ್ 40ನೆ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.

 
ತಿರೂರು ಸೈಯದ್ ಕೋಯಣ್ಣಿಕೋಯ ತಂಙಳ್ ಮತ್ತು ಆಯಿಶಾ ಬೀಬಿ ದಂಪತಿಯ ಪುತ್ರರಾದ ವೈಲತ್ತೂರು ಅವರು ನಿಧನದ ಕೆಲವೇ ಗಂಟೆಗಳ ಮೊದಲು ಕರಲಿಪಂಪೊಯಿಲ್ ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು. ಶೇಖ್ ಮುಹಿಯೂದ್ದೀನ್ ಅಬ್ದುಲ್ ಖಾದರ್ ಜೀಲಾನಿ ಪರಂಪರೆಗೆ ಸೇರಿದ ಕವರತ್ತಿ ದ್ವೀಪದಲ್ಲಿ ಸಮಾಧಿಸ್ಥರಾಗಿರುವ ಸೈಯದ್ ಖಾಸಿಂ ವಲಿಯುಲ್ಲಾಹ್ ಅವರ ಐದನೆ ಪೌತ್ರರಾಗಿರುವ ವೈಲತ್ತೂರ್ ತಂಙಳ್ ಅವರು ಸಿಎಂ ಮಡವೂರು ವಲಿಯುಲ್ಲಾಹ್ ಅವರ ಶಿಷ್ಯರಾಗಿ ಸೇವೆ ಸಲ್ಲಿಸಿದ್ದರು. ತಂಙಳ್ ಅವರು 2014ರಲ್ಲಿ ಪವಿತ್ರ ಕಅಬಾ ಶರೀಫ್ ಶುಚೀಕರಣ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದರು.

ಮೃತರು ಪತ್ನಿ ಸಫಿಯ್ಯಿ ಬೀಬಿ ಮೂವರು ಪುತ್ರರು, ಮೂವರು ಪುತ್ರಿಯರ ಸಹಿತ ಹಲವು ಬಂಧು, ಮಿತ್ರರನ್ನು ಅಗಲಿದ್ದಾರೆ.

ಸಂತಾಪ:

ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್, ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಬೇಕಲ್ ಉಸ್ತಾದ್, ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೇನ್ ಸಅದಿ, ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News