ಬೆಂಕಿ ಆಕಸ್ಮಿಕ: ನಾಲ್ಕು ಗುಡಿಸಲು ಭಸ್ಮ
Update: 2017-01-21 23:24 IST
ಮಣಿಪಾಲ, ಜ.21: ಸರಳೇಬೆಟ್ಟು ನೆಹರು ನಗರದ ಖಾಸಗಿ ಸಂಸ್ಧೆಗೆ ಸೇರಿದ ಜಾಗದಲ್ಲಿರುವ ಬಿಜಾಪುರ ಕಾಲೋನಿಯಲ್ಲಿ ಇಂದು ಬೆಳಗ್ಗೆ ಸಂಭವಿ ಸಿದ ಬೆಂಕಿ ಆಕಸ್ಮಿಕದಿಂದ ನಾಲ್ಕು ಗುಡಿಸಲುಗಳು ಸುಟ್ಟು ಭಸ್ಮವಾಗಿರುವ ಬಗ್ಗೆ ವರದಿಯಾಗಿದೆ.
ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಇಲ್ಲಿ ಹಲವು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದು, ಇಂದು ಬೆಳಿಗ್ಗೆ ಇವರೆಲ್ಲ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಆಗ ಒಂದು ಗುಡಿಸಲಿನಲ್ಲಿ ದೇವರಿಗೆ ಇಟ್ಟ ದೀಪದ ಬೆಳಕು ಗುಡಿಸಲಿಗೆ ತಗಲಿತೆನ್ನಲಾಗಿದೆ. ಇದರ ಕೆನ್ನಾಲಿಗೆ ಇತರ ಗುಡಿಸಲುಗಳಿಗೆ ಹರಡಿತೆನ್ನಲಾಗಿದೆ.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಉಡುಪಿಯ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.