ಹೊಳೆಗೆ, ಬಿದ್ದು, ಮೃತ್ಯು,
Update: 2017-01-21 23:59 IST
ಬೈಂದೂರು, ಜ.21: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಜ.21ರಂದು ಬೆಳಗಿನ ಜಾವ ಬಿಜೂರು ಗ್ರಾಮದ ಬಿಲಿಪಟ್ಟೆ ಎಂಬಲ್ಲಿನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ನಾರಾಯಣ ಬಿಲ್ಲವ(72) ಎಂದು ಗುರುತಿಸಲಾಗಿದೆ. ಇವರು ಮನೆ ಬಳಿಯ ಹೊಳೆಗೆ ಬರ್ಹಿದೆಸೆಗೆಂದು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.