ಉಡುಪಿಗೆ ಒಟ್ಟು ಆರು ತಾಲೂಕುಗಳು ಬೇಕು: ಸೊರಕೆ

Update: 2017-01-21 18:30 GMT

ಪಡುಬಿದ್ರೆ, ಜ.21: ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ, ಬೈಂದೂರು, ಕಾಪು ಸೇರಿ ಒಟ್ಟು ಆರು ತಾಲೂಕು ಕೇಂದ್ರ ಮಂಜೂರು ಮಾಡಬೇಕು ಎಂದು ಶಾಸಕ ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

ತೆಂಕ ಎರ್ಮಾಳು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹೊಸ ತಾಲೂಕು ವಿಸ್ತರಣೆ ಬಗ್ಗೆ ಯಾವುದೇಸಮಿತಿಯಲ್ಲೂ ಕಾಪುವಿನ ಹೆಸರು ಶಿಫಾರಸು ಗೊಂಡಿಲ್ಲ. ಆದರೆ ಎಂ.ಪಿ.ಪ್ರಕಾಶ್ ಸಮಿತಿಯಲ್ಲಿ ಕಾಪುವಿಗೆವಿಶೇಷ ತಹಶೀಲ್ದಾರ್ ನೇಮಕ ಮಾಡಬೇಕೆಂಬಶಿಫಾರಸು ಮಾಡಲಾಗಿದೆ.ತಾಲೂಕು ರಚನೆ ಬೇಡಿಕೆಗೆಸುಮಾರು 16 ಗ್ರಾಪಂಗಳ ಸರ್ವಾನುಮತದ ನಿರ್ಣಯ ನಡೆದಿದೆ ಎಂದರು.

ಅದಮಾರು ಪಶುಚಿಕಿತ್ಸಾಲಯ ಉದ್ಘಾಟನೆ:  ತೆಂಕ ಗ್ರಾಪಂ ಅದಮಾರಿನಲ್ಲಿ ಸುಮಾರು 24.80 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾದ ಪಶು ಚಿಕಿತ್ಸಾಲಯದ ನೂತನ ಕಟ್ಟಡವನ್ನು ಶಾಸಕ ಸೊರಕೆ ಇದೇ ಸಂದರ್ಭ ಉದ್ಘಾಟಿಸಿದರು.

ಈ ಸಂದರ್ಭ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಅರುಣಾ ಕುಮಾರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ದೀಪಕ್ ಎರ್ಮಾಳು, ವಿಶ್ವಾಸ್ ವಿ. ಅಮೀನ್, ಜಿತೇಂದ್ರ ಫುರ್ಟಾಡೊ, ಬಾಲಚಂದ್ರ, ಡಾ.ಸರ್ವೋತ್ತಮ ಉಡುಪ, ಡಾ.ದಯಾನಂದ ಪೈ, ರವೀಂದ್ರ ಹೆಬ್ಬಾರ್, ವಸಂತ್, ಸಂಪತ್ ಕುಮಾರ್, ಶಿವಪುತ್ರಯ್ಯ, ಯು. ಆನಂದ್, ಇಂಜಿನಿಯರ್ ದಿನೇಶ್ ಕುಮಾರ್, ಶಶಿಧರ ಶೆಟ್ಟಿ ಎಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ವಾರಾಹಿ ಯೋಜನೆಯಡಿ ಸಉಮಾರು 12 ಲಕ್ಷ ರೂ. ವೆಚ್ಚದಲ್ಲಿ ಪೂಂದಾಡು ಎಸ್ಸಿ ಕಾಲನಿಯ ಸದಾಶಿವರ ಮನೆಯಿಂದ ಸಾದು ಪಂಬದರ ಮನೆಯವರೆಗೆ ರಸ್ತೆ ಕಾಂಕ್ರಿಟ್ ಕಾಮಗಾರಿ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ಪಿಲ್ಲು ಪಾಂಬದಿ ಮನೆಯಿಂದ ಸೇಸಿ ಮುಖಾರ್ತಿ ಮನೆಯವರೆಗೆ ಕಾಂಕ್ರಿಟೀಕೃತ ರಸ್ತೆಯನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News