×
Ad

ಸಚಿವರ ರಮಾನಾಥ ರೈ ಪ್ರವಾಸ

Update: 2017-01-22 00:05 IST

ಮಂಗಳೂರು, ಜ.21: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜ.22 ಮತ್ತು 23ರಂದು ದ.ಕ. ಜಿಲ್ಲೆಯಲ್ಲಿ ಕೈಗೊಳ್ಳಲಿದ್ದಾರೆ.

  ಜ.22ರಂದು ಬೆಳಗ್ಗೆ 9ಕ್ಕೆ ಕಡೇಶ್ವಾಲ್ಯ ಆರಿಕಲ್ಲು ಗೆಳೆಯರ ಬಳಗದ ಆಶ್ರಯದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾ ಕೂಟದ ಉದ್ಘಾಟನೆ, 10ಕ್ಕೆ ಕಳ್ಳಿಗೆ ಓಂ ಫ್ರೆಂಡ್ಸ್ ಕ್ಲಬ್‌ನ ನೂತನ ಕಟ್ಟಡ ಉದ್ಘಾಟನೆ, 11ಕ್ಕೆ ಪಾಣೆಮಂಗಳೂರು ಸುಮಂಗಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಫರಂಗಿಪೇಟೆ ಶಾಖೆಯ ಉದ್ಘಾಟನೆ, ಸಂಜೆ 6:30ಕ್ಕೆ ಮಂಗಳೂರು ಯು. ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಸಮಾರೋಪ ಸಮಾರಂಭ, 7:30ಕ್ಕೆ ಅಶೋಕ್ ನಗರದ ಸ್ಪಂದನ ಫ್ರೆಂಡ್ಸ್,ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

 ಜ.23ರಂದು ಬೆಳಗ್ಗೆ 9:30ಕ್ಕೆ ವಾಮದಪದವು ಸರಕಾರಿ ಪಪೂ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಮತ್ತು ದತ್ತಿನಿಧಿ ಬಹುಮಾನ ವಿತರಣೆ ಸಮಾರಂಭ, 10:30ಕ್ಕೆ ಮಂಗಳೂರು ಕ್ರೀಡಾಂಗಣದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಕ್ರೀಡಾಕೂಟದ ಉದ್ಘಾಟನೆ, ಅಪರಾಹ್ನ 2ಕ್ಕೆ ಬೆಂಜನಪದವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News