×
Ad

ಬೆಂಗಳೂರು: ಇಂದು ಸಅದಿಯಾ ಮಹಿಳಾ ಕಾಲೇಜು ಉದ್ಘಾಟನೆ

Update: 2017-01-22 00:06 IST

ಬೆಂಗಳೂರು, ಜ.21: ನಗರದ ಬನಶಂಕರಿಯಲ್ಲಿ ಕಾರ್ಯಾ ಚರಿಸುತ್ತಿರುವ ಸಅದಿಯಾ ಎಜ್ಯುಕೇಶನಲ್ ಫೌಂಡೇಶನ್ ಮತ್ತು ರಿದಾ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿಟಾನರಿ ರೋಡ್ ಸಮೀಪದ ಶಾಮ್‌ಪುರ ರಸ್ತೆಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಸಅದಿಯ ಶರೀಅತ್ ಮಹಿಳಾ ಕಾಲೇಜು ಜ.22ರಂದು ಉದ್ಘಾಟನೆಗೊಳ್ಳಲಿದೆ.

ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಕಾಲೇಜನ್ನು ಉದ್ಘಾಟಿಸುವರು.

 ಶರೀಅತ್‌ನ ಉನ್ನತ ವ್ಯಾಸಂಗ ಸಹಿತ ಸಾಮಾನ್ಯ ಶಿಕ್ಷಣ ನೀಡುವ ನಗರದ ಪ್ರಥಮ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಮಾಜಿ ಅಡ್ವೋಕೇಟ್ ಜನರಲ್ ಡಾ.ಬಿ.ವಿ.ಆಚಾರ್ಯ, ಶಾಸಕ ಶ್ರೀನಿವಾಸಮೂರ್ತಿ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಎಸ್.ಎಸ್.ಖಾದರ್ ಹಾಜಿ, ಕೆಸಿಎಫ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಹಾಜಿ ಶೇಕ್ ಬಾವ, ಅನ್ವರ್ ಶರೀಫ್, ಖಮರ್ ಪಾಶಾ ಮತ್ತಿತರರು ಭಾಗಹಿಸುವರು ಎಂದು ಸಅದಿಯಾ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ.ಶಾಫಿ ಸಅದಿ ನಂದಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News