×
Ad

​ನರಮಾಂಸ ತಿಂದ ಬಾಲಕ?

Update: 2017-01-22 00:13 IST

ಲೂಧಿಯಾನಾ, ಜ.21: ಮನುಕುಲವನ್ನೇ ಬೆಚ್ಚಿಬೀಳಿಸುವ ಸುದ್ದಿ ಇದು. ಹದಿನಾರು ವರ್ಷದ ಹದಿಹರೆಯದ ಬಾಲಕ ಒಂಬತ್ತು ವರ್ಷದ ಬಾಲಕನನ್ನು ಹತ್ಯೆ ಮಾಡಿ, ದೇಹವನ್ನು ಆರು ಭಾಗಗಳಾಗಿ ಕತ್ತರಿಸಿ, ಮಾಂಸವನ್ನು ತಿಂದು, ರಕ್ತ ಕುಡಿದ ಬೀಭತ್ಸ ಘಟನೆ ವರದಿಯಾಗಿದೆ.

ಘಟನೆಯ ವಿವರ: ನಗರದ ದೀಪು ಕುಮಾರ್ ಎಂಬ ಬಾಲಕ ಸೋಮವಾರ ನಾಪತ್ತೆಯಾಗಿದ್ದ. ಆತನ ರುಂಡ ಕತ್ತರಿಸಿದ ದೇಹ ಡುಂಗ್ರಿ ಪ್ರದೇಶದ ಖಾಲಿ ಜಾಗದಲ್ಲಿ ಪತ್ತೆಯಾಗಿತ್ತು. ಹತ್ಯೆಗೀಡಾದ ಬಾಲಕ ಹಾಗೂ ಆರೋಪಿ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸವಿದ್ದ ವಲಸೆ ಕಾರ್ಮಿಕರ ಮಕ್ಕಳು. ದೀಪುವನ್ನು ಕೊಂದ ಎಂಟನೇ ತರಗತಿ ವಿದ್ಯಾರ್ಥಿ ಮನೆಗೆ ಬಂದು ಸಹಜವಾಗಿಯೇ ಇದ್ದ. ಅಣ್ಣನ ಜತೆ ಸೇರಿ ಹೊರಗಿರುವ ತಂದೆ ತಾಯಿಗೆ ಅಡುಗೆಯನ್ನೂ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಆದರೆ ಸಿಸಿ ಟಿವಿ ದೃಶ್ಯಾವಳಿ ಪೊಲೀಸರನ್ನೇ ಬೆಚ್ಚಿ ಬೀಳಿಸಿತು. ನಾಪತ್ತೆಯಾದ ಬಾಲಕ, ಹದಿಹರೆಯದ ಯುವಕನ ಜತೆಗೆ ಇದ್ದ. ಪೊಲೀಸರು ಈ ಯುವಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಬಾಲಕನನ್ನು ಕೊಂದು, ಕತ್ತರಿಸಿ, ಮಾಂಸ ತಿಂದು ರಕ್ತ ಕುಡಿದ ವಿಷಯವನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇದೊಂದು ನರಕ್ಷಣೆ ಪ್ರಕರಣ. ಸಾಮಾನ್ಯವಾಗಿ ಹಸಿ ಕೋಳಿಮಾಂಸ ತಿನ್ನುತ್ತಿದ್ದ ಯುವಕ ಕೆಲವೊಮ್ಮೆ ತನ್ನ ಕಾಲಿನ ಭಾಗವನ್ನೇ ಕಚ್ಚಿಕೊಂಡು ತಿಂದದ್ದಿದೆ ಎಂದು ಡಿಸಿಪಿ ಭೂಪಿಂದರ್ ಸಿಂಗ್ ಹೇಳಿದರು. ಪೊಲೀಸರು ಯುವಕನನ್ನು ವೈದ್ಯಕೀಯ ಹಾಗೂ ಮಾನಸಿಕ ಪರೀಕ್ಷೆಗೆ ಗುರಿಪಡಿಸಿದ್ದಾರೆ.
ಗಾಳಿಪಟದ ದಾರ ಕೊಡುವುದಾಗಿ ಹೇಳಿ ಸೋಮವಾರ ಮಧ್ಯಾಹ್ನ ಬಾಲಕನನ್ನು ಮನೆಗೆ ಕರೆದೊಯ್ದ ಈ ಯುವಕ, ಬಾಲಕನನ್ನು ಹತ್ಯೆ ಮಾಡಿ, ಹರಿತ ಆಯುಧಗಳಿಂದ ಬಚ್ಚಲುಮನೆಯಲ್ಲಿ ಕತ್ತರಿಸಿ ತಿಂದಿದ್ದಾನೆ. ಉಳಿದ ಬಾಗವನ್ನು ಚೀಲದಲ್ಲಿ ತುಂಬಿ ಸೈಕಲ್‌ನಲ್ಲಿ ಒಯ್ದು ಬಿಸಾಕಿದ್ದಾನೆ. ಬಾಲಕನ ಹೃದಯ ಭಾಗವನ್ನು ಶಾಲೆಯ ಕ್ಯಾಂಪಸ್‌ನಲ್ಲಿ ಎಸೆದಿದ್ದಾನೆ. ಶಿಕ್ಷಕರ ಮೇಲೆ ಸಿಟ್ಟಿನಿಂದ ಶಾಲೆಗೆ ಕೆಟ್ಟಹೆಸರು ಬರಬೇಕು ಎಂದು ಹೀಗೆ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News