×
Ad

ಎ.ಕೆ.ಗ್ರೂಪ್ ಸಂಸ್ಥೆಯ ‘ಆ್ಯಪಲ್ ಮಾರ್ಟ್’ ಸೂಪರ್‌ಮಾರ್ಕೆಟ್ ಶುಭಾರಂಭ

Update: 2017-01-22 12:33 IST

ಮಂಗಳೂರು, ಜ.22: ಎ.ಕೆ.ಗ್ರೂಪ್ ಸಂಸ್ಥೆಯ ನೂತನ ‘ಆ್ಯಪಲ್ ಮಾರ್ಟ್’ ಸೂಪರ್‌ಮಾರ್ಕೆಟ್ ಕದ್ರಿ ಸಿಟಿ ಆಸ್ಪತ್ರೆ ಬಳಿಯ ಸುಶೀಲಾ ನಿಕೇತನ್ ಸಂಕೀರ್ಣದಲ್ಲಿ ಇಂದು ಉದ್ಘಾಟನೆಗೊಂಡಿತು.

ನೂತನ ‘ಆ್ಯಪಲ್ ಮಾರ್ಟ್’ ಸೂಪರ್ ಮಾರ್ಕೆಟ್‌ನ ಉದ್ಘಾಟನೆಯನ್ನು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಪ್ರೊ.ಡಾ.ಕೆ.ಭಾಸ್ಕರ್ ಶೆಟ್ಟಿ ನೆರವೇರಿಸಿದರು.

ಕ್ಯಾಶ್ ಕೌಂಟರ್‌ನ ಉದ್ಘಾಟನೆಯನ್ನು ಡೆಲ್ಟಾ ಇನ್‌ಫ್ರಾಲಾಜಿಸ್ಟಿಕ್ಸ್ (ವಲ್ಡ್‌ವೈಡ್) ಲಿಮಿಟೆಡ್‌ನ ಅಹ್ಮದ್ ಮುಹಿಯುದ್ದೀನ್ ಮತ್ತು ಫುಡ್ ವಿಭಾಗದ ಉದ್ಘಾಟನೆಯನ್ನು ಎನ್.ಜೆ.ಬಿಲ್ಡರ್ಸ್‌ ಆ್ಯಂಡ್ ಪ್ರೊಮೋಟರ್ಸ್‌ನ ಅಧ್ಯಕ್ಷ ನೋಯಲ್ ಎಫ್.ಸಿ. ಪಿಂಟೊ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆ್ಯಂಪಲ್ ಮಾರ್ಟ್‌ನ ಪಾಲುದಾರರಾದ ಮುಹಮ್ಮದ್ ನಿಸಾರ್, ಮುಹಮ್ಮದ್ ಹನೀಫ್ ಪಿ.ಎಸ್, ಆಡಳಿತ ಪಾಲುದಾರ ತಾಹಿರ್, ಎ.ಕೆ.ಗ್ರೂಪ್‌ನ ಅಧ್ಯಕ್ಷ ಅಹ್ಮದ್ ಎ.ಕೆ., ನಿರ್ದೇಶಕರಾದ ರಝಾಕ್, ನಿಯಾಝ್, ನಾಝಿಮ್, ಸಾಜಿದ್, ನೌಶಾದ್, ಪ್ರಶಾಂತ್ ಮತ್ತು ಅನಿಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಹಮ್ಮದ್ ನಿಸಾರ್ ಅವರು, ಇಂದು ಉದ್ಘಾಟನೆಗೊಂಡಿರುವ ‘ಆ್ಯಪಲ್ ಮಾರ್ಟ್’ ಜಿಲ್ಲೆಯಲ್ಲಿ ಎರಡನೆಯ ಸೂಪರ್ ಮಾರ್ಕೆಟ್ ಆಗಿದ್ದು, ಈ ಹಿಂದೆ ಏರ್‌ಪೋರ್ಟ್ ರಸ್ತೆಯಲ್ಲಿ ಉದ್ಘಾಟನೆಗೊಂಡು ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಹೊರ ಭಾಗದಲ್ಲಿಯೂ ‘ಆ್ಯಪಲ್ ಮಾರ್ಟ್’ ಸೂಪರ್ ಮಾರ್ಕೆಟ್ ಪ್ರಾರಂಭಿಸುವ ಉದ್ದೇಶವನ್ನೂ ಹೊಂದಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News