ಏಳು ಅಪ್ರಾಪ್ತ ವಯಸ್ಕ ಬಾಲಕರಿಂದ 11ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!
Update: 2017-01-22 13:59 IST
ಶಿಲ್ಲಾಂಗ್,ಜ.22: ಮೇಘಾಲಯದ ನೈರುತ್ಯ ಖಾಸಿ ಹಿಲ್ಸ್ ಜಿಲ್ಲೆಯ ಮಾವ್ಟೆನ್ ಗ್ರಾಮದಲ್ಲಿ ಏಳು ಅಪ್ರಾಪ್ತ ವಯಸ್ಕ ಬಾಲಕರ ಗುಂಪೊಂದು 11ರ ಹರೆಯದ ಬಾಲಿಕೆಯ ಮೇಲೆ ಕನಿಷ್ಠ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಪೊಲೀಸರು ಇಂದು ತಿಳಿಸಿದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗ್ರಾಮದಲ್ಲಿಯ ಭತ್ತದ ಗದ್ದೆಯಲ್ಲಿ ಮೊದಲ ಬಾರಿಗೆ ಮತ್ತು ಜ.13ರಂದು ಆಕೆಯ ಮನೆಯಲ್ಲಿ ಮತ್ತೊಮ್ಮೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಆರೋಪಿಗಳೆಲ್ಲ ಬಾಲಕಿಯ ಗ್ರಾಮದವರೇ ಆಗಿದ್ದು, 14ರಿಂದ 16ವರ್ಷ ವಯೋಮಾನದವರಾಗಿದ್ದಾರೆ.
ಬಾಲಕಿಯ ಹೆತ್ತವರು ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.