ಚುನಾವಣೆಗೆ ಸ್ಪರ್ಧಿಸಲು ಜಾಮೀನು ಕೋರಿದ ಆಸಾರಾಂ ಪುತ್ರ
Update: 2017-01-22 15:04 IST
ಸೂರತ್, ಲಖ್ನೊ, ಜ.22: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾದ ಆಸಾರಾಂ ಬಾಪೂ ಪುತ್ರ ನಾರಾಯಣ ಸಾಯಿ ಉತ್ತರ ಪ್ರದೇಶ ದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅನುವಾಗುವಂತೆ ಜಾಮೀನು ಮಂಜೂರು ಮಾಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನಾರಾಯಣ ಸಾಯಿಯನ್ನು ಸೂರತ್‌ನ ಓರ್ವ ಮಹಿಳೆಯ ಅತ್ಯಾಚಾರ ಆರೋಪದಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ವರದಿ ತಿಳಿಸಿದೆ.