×
Ad

ಹಕ್ಕುಗಳೊಂದಿಗೆ,ಕರ್ತವ್ಯ ನಿರ್ವಹಿಸಿ ದೇಶದ ಅಭಿವೃದ್ಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ-ನ್ಯಾ.ಜೋಸೆಫ್ ಕುರಿಯನ್

Update: 2017-01-22 15:51 IST

ಮಂಗಳೂರು,ಜ.16: ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸಿ,ಕರ್ತವ್ಯಗಳನ್ನು ನಿರ್ವಹಿಸಿ ಆ ಮೂಲಕ ದೇಶದ ಅಭಿವೃದ್ಧಿ ಚಟುವಟಿಕೆಯಲ್ಲಿ ಪಾಲ್ಗೊಳಿ ಎಂದು ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಜೋಸೆಫ್ ಕುರಿಯನ್ ಯುವಜನರಿಗೆ ಕರೆ ನೀಡಿದರು.

   ಸಂತ ಜೊಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜನವರಿ 18ರಿಂದ 22ರವರೆಗೆ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರಮಟ್ಟದ 10ನೆ ಕಥೊಲಿಕ್ ಯುವ ಸಮಾವೇಶದ ಸಮಾರೋಪ ಸಮಾರಂಭ ನಗರದ ಅಲೋಶಿಯಸ್ ಕಾಲೇಜಿನ ಮೈದಾನದಲ್ಲಿ ರವಿವಾರ ನಡೆದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

          ಭಾರತ ಹಲವು ಭಾಷೆ,ಸಂಸ್ಕೃತಿಯನ್ನು ವೈವಿಧ್ಯತೆಯನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶ ಹಾಗೂ ಜಾತ್ಯತೀತ ತತ್ವವನ್ನು ಪಾಲಿಸುತ್ತಿರುವ ದೇಶವಾಗಿದೆ .ಈ ದೇಶದ ಪ್ರಜೆಗಳು ಯಾರೂ ಯಾವ ಧರ್ಮವನ್ನು ಸ್ವೀಕರಿಸುವ ,ಆಚರಿಸುವ ಮತ್ತು ತಮ್ಮ ಧರ್ಮದ ಬಗ್ಗೆ ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ.ಆ ಕಾರಣದಿಂದ ಇಲ್ಲಿ ಈ ರೀತಿಯ ವೈವಿಧ್ಯತೆಗಳನ್ನು ಕಾಣಲು ಸಾಧ್ಯವಾಗಿದೆ.ಸಂವಿಧಾನವೂ ಎಲ್ಲರನ್ನೂ ಸಮಾನವಾಗಿ ಕಾಣುವ ನೀತಿಯನ್ನು ಹೊಂದಿದೆ.ಆ ರೀತಿಯ ಹಕ್ಕುಗಳನ್ನು ಜನರಿಗೆ ನೀಡಿದೆ.ಅದೇ ರೀತಿ ಸಂವಿಧಾನದಲ್ಲಿ ದೇಶದ ಸೌರ್ವ ಭೌಮತೆಯನ್ನು ಕಪಾಡುವ,ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು,ಮಾನವೀಯತೆಯಲ್ಲಿ ವರ್ತಿಸಬೇಕು,ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಮಾಡದೆ ಸಂರಕ್ಷಿಸಬೇಕು,ರಾಷ್ಟ್ರ ಧ್ವಜ,ರಾಷ್ಟ್ರಗೀತೆಗೆ ಗೌರವ ನೀಡಬೇಕು ಎನ್ನುವ ಕರ್ತವ್ಯಗಳನ್ನು ನಮಗೆ ನೀಡಿದೆ ಅದನ್ನು ಪಾಲಿಸಬೇಕಾಗಿದೆ ಎಂದು ಜೊಸೆಫ್ ಕುರಿಯನ್ ತಿಳಿಸಿದರು.

 ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನಮ್ಮ ಹೊಣೆಗಾರಿಕೆ :-ನಾನು ಪ್ರಥಮವಾಗಿ ಭಾರತೀಯ ಬಳಿಕ ನನ್ನನ್ನು ನಾನು ಕ್ರಿಶ್ಚಿಯನ್ ಎಂದು ಪರಿಗಣಿಸುತ್ತೇನೆ.ಕಾನೂನು ಬಾಹಿರವಾದ ಚಟುವಟಿಕೆ ನಡೆಯುತ್ತಿದ್ದಾಗ ಅದರ ವಿರುದ್ಧ ಧ್ವನಿ ಎತ್ತುವುದು ನಮ್ಮ ಹೊಣೆಗಾರಿಕೆಯಾಗಿದೆ.ಆಗ ನಾವು ನಿಜವಾದ ಭಾರತೀಯ ,ನೈಜ ಕ್ರೈಸ್ತರಾಗಲು ಸಾಧ್ಯ ಎಂದು ಜೊಸೆಫ್ ಕುರಿಯನ್ ತಿಳಿಸಿದರು.

 ರ್ಯಾಲಿ ನಗರದ ರೋಸಾರಿಯೋ ಕಥಡ್ರಲ್‌ನಿಂದ ಸಂತ ಅಲೋಶಿಯಸ್ ಮೈದಾನಕ್ಕೆ ತಲುಪಿ ಅಲ್ಲಿ ರವಿವಾರ ಬೆಂಗಳೂರಿನ ಆರ್ಚ್ ಬಿಷಪ್ ಅತೀ ವಂದನೀಯ ಬರ್ನಾರ್ಡ್ ಮೊರಾಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಢೀಸ್,ಶಾಸಕರಾದ ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ,ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಡಿ ಸೋಜ, ಸಿಬಿಸಿಐ ಅಧ್ಯಕ್ಷ ಕಾರ್ಡಿನಲ್ ಬಸೇಲಿಯಸ್ ಕ್ಲೀಮಿಸ್,ಏರ್ನಾಕುಲಂನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಆಲೆಂಚೆರ್ರಿ,ಫೆಡರೇಶನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮುಂಬೈ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ,ಬಿಷಪ್ ಹೆನ್ರಿ ಡಿ ಸೋಜ ,ವಂ.ಮರಿ ಜೋಸೆಫ್,ವಿಪಿನ್ ಪೌಲ್,ಅಲ್ಭರ್ಟ್ ಡಿ ಸೋಜ,ಚೇತನ್ ಮಚಾದೋ,ಜ್ಯಾಕ್ಸನ್ ಡಿ ಕೊಸ್ಟ ,ಲಾರೆನ್ ಮುಕಝಿ ,ಸೀಬರ್ಟ್ ಡಿ ಸಿಲ್ವ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News