×
Ad

ಕೇರಳ : ಜನಸಂಪರ್ಕ ಸಭೆಯ ಬದಲಿಗೆ ಹೊಸ ಯೋಜನೆ

Update: 2017-01-22 16:34 IST

ಆಲಪ್ಪುಝ,ಜ.22: ಕೇರಳದ ಹಿಂದಿನ ಕಾಂಗ್ರೆಸ್ ಸರಕಾರದಜನಸಂಪರ್ಕ ಯೋಜನೆಗೆ ಬದಲಿಗೆ ಈಗಿ ನ ಎಲ್‌ಡಿಎಫ್ ಸರಕಾರ ಮುಖ್ಯಮಂತ್ರಿ ಜನಸಾಂತ್ವನ ಫಂಡ್ ಜಾರಿಗೆ ಬರುತ್ತಿದೆ.ಸೌಲಭ್ಯಕೋರುವವರು ಬಿಳಿಕಾಗದದಲ್ಲಿ ಅರ್ಜಿಕೊಟ್ಟರೆ ಸಾಕು. 

ಅರ್ಹರನ್ನು ಗುರುತಿಸಿ ಒಂದು ತಿಂಗಳೊಳಗೆ ಸಹಾಯಧನ ಬ್ಯಾಂಕ್ ಖಾತೆಗೆ ತಲುಪಿಸಲಾಗುವುದು. ಸಾರ್ವಜನಿಕರು, ಸ್ವಯಂಸೇವಾಸಂಘಟನೆಗಳು, ಸಂಸ್ಥೆಗಳು, ಪ್ರಮುಖ ವ್ಯಕ್ತಿಗಳುಮುಂತಾದವರಿಂದ ಸಹಾಯಫಂಡ್‌ಗೆ ಹಣವನ್ನು ಸಂಗ್ರಹಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.

ಉಮ್ಮನ್ ಚಾಂಡಿ ಸರಕಾರದ ಜನಪ್ರಿಯ ಯೋಜನೆ ಜನಸಂಪರ್ಕ ಕಾರ್ಯಕ್ರಮವಾಗಿತ್ತು. ಆದರೆ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಪಡೆಯಲು ಕಷ್ಟವಾಗುತ್ತಿತ್ತು. ಹೊಸಯೋಜನೆಯಲ್ಲಿ ಇಂತಹ ಯಾವುದೇ ಅಡ್ಡಿಗಳಿಲ್ಲ ಎನ್ನಲಾಗಿದೆ. ಫಲಾನುಭವಿಗಳು ನೇರ ಮನವಿ ಸಲ್ಲಿಸಬೇಕಿಲ್ಲ.

ಅಶಕ್ತರ ಕುರಿತು ಮಾಧ್ಯಮ ವರದಿಗಳನ್ನು ಗಮನಕ್ಕೆ ತಂದರೆ ಸಹಾಯ ಸಿಗಲಿದೆ.ತುರ್ತು ಸಮಸ್ಯೆ ಪರಿಹರಿಸುವ ಅಗತ್ಯವಿರುವವರಿಗೆ ತುರ್ತು ಪರಿಹಾರ, ಸಾರ್ವಜನಿಕ ಸಂಸ್ಥೆಗಳಿಗೆ ಅಗತ್ಯವಿರುವ ತುರ್ತು ದುರಸ್ತಿ, ಮನೆಯಜಮಾನ ನಿಧನರಾದರೆ , ರೋಗಪೀಡಿತನಾಗಿ ಮಲಗಿದ್ದಲ್ಲಾದರೆ ಕುಟುಂಬಕ್ಕೆ ಜೀವನೋಪಾಯಕ್ಕೆ ಅಗತ್ಯವಿರುವುದನ್ನು ಕೊಡುವುದು. ಮನೆಯಿಲ್ಲದವರಿಗೆ ಮನೆ, ವಿಧವೆಯರಿಗೆ, ಅನಾಥರಿಗೆ , ವೃದ್ಧರಿಗೆ,ಗುಣಮುಖವಾಗದ ರೋಗಿಗಳಿಗೆ, ಕಿರುಕುಳಕ್ಕೊಳಗಾದವರಿಗೆ ಮುಂತಾದವರಿಗೆ ಅಗತ್ಯಸೌಕರ್ಯಗಳನ್ನು ಒದಗಿಸುವುದು ಇತ್ಯಾದಿ ಮುಖ್ಯಮಂತ್ರಿಯ ಸಾಂತ್ವನ ಫಂಡ್ ಮೂಲಕ ಜಾರಿಗೊಳಿಸಲಾಗುವುದು.

ಮುಖ್ಯಮಂತ್ರಿ, ಹಣಕಾಸು ಸಚಿವ, ಮುಖ್ಯಕಾರ್ಯದರ್ಶಿ, ಹಣಕಾಸು ಸಚಿವಾಲಯದ ಅಧೀನ ಮುಖ್ಯ ಕಾರ್ಯದರ್ಶಿ,ಜಿಲಾಧಿಕಾರಿಗಳು ಇವರಲ್ಲಿ ಯಾರಿಗೂ ಅರ್ಜಿಸಲ್ಲಿಸಬಹುದಾಗಿದೆ. ಈ ಹಿಂದೆ ಸಹಾಯ ಸಿಕ್ಕವರನ್ನು ಪರಿಗಣಿಸಲಾಗುವುದಿಲ್ಲ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News