×
Ad

ಅಗತ್ಯ ಬಿದ್ದರೆ ಕಂಬಳದ ನಿಷೇಧದ ವಿರುದ್ಧ ಸುಗ್ರೀವಾಜ್ಞೆಗೆ ಪ್ರಸ್ತಾವನೆ ಕಳಿಸುತ್ತೇವೆ : ಐವನ್ ಡಿಸೋಜಾ

Update: 2017-01-22 17:52 IST

ಮಂಗಳೂರು , ಜ.22  : ಕಂಬಳದ ನಿಷೇಧದ ವಿರುದ್ಧ  ಅಗತ್ಯ ಬಿದ್ದರೆ ಸಂಪುಟ ಸಭೆ ಸೇರಿ ಸುಗ್ರೀವಾಜ್ಞೆಗೆ ಪ್ರಸ್ತಾವನೆ ಕಳಿಸುತ್ತೇವೆ ಎಂದು ಸರ್ಕಾರಿ ಮುಖ್ಯ ಸಚೇತಕ ಐವಾನ್ ಡಿಸೋಜಾ ಹೇಳಿದ್ದಾರೆ.

 ಜಾನಪದ ಕ್ರೀಡೆ ಕಂಬಳ ನಿಷೇಧ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಈ ಮೇಲಿನಂತೆ ಅವರ ಉತ್ತರಿಸಿದರು.

ಕಂಬಳ ಕರಾವಳಿಯ ವೀರ, ಜಾನಪದ ಕ್ರೀಡೆ . ಇದಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಜಾನಪದೀಯ ಹಿನ್ನೆಲೆ ಇದೆ. ಸರ್ಕಾರದ ಕಂಬಳ ಆಚರಣೆಯ ಪರವಾಗಿದ್ದು ,  ಕಂಬಳಕ್ಕೆ ಅನುದಾನವನ್ನೂ ನೀಡಿದೆ . ಕಂಬಳ ಸಂಘಟಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿದೆ ಎಂದು ಹೇಳಿದರು.

ಕಂಬಳ ನಡೆಸಬೇಕು ಎಂದು ಸರ್ಕಾರ  ನ್ಯಾಯಾಲಯಕ್ಕೆ ಅಫಿದಾವಿತ್ ಕೊಟ್ಟಿದ್ದು ,  ಹೈಕೋರ್ಟಿನ ತೀರ್ಪಿಗೆ ಕಾಯಲಾಗುತ್ತಿದೆ. ಅಗತ್ಯ ಬಿದ್ದರೆ ಸಂಪುಟ ಸಭೆ ಸೇರಿ ಸುಗ್ರೀವಾಜ್ಞೆಗೆ ಪ್ರಸ್ತಾವನೆ ಕಳಿಸುತ್ತೇವೆ ಎಂದು ಭರವಸೆ ನೀಡಿದರು.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಸುಗ್ರೀವಾಜ್ಷೆಯ ಮೂಲಕ ಅನುಮತಿ ದೊರಕಿದ ನಂತರ ಕಂಬಳ  ನಿಷೇಧ ತೆರವಿನ  ವಿಚಾರದಲ್ಲಿಯೂ ಅದನ್ನೇ ಅನುಸರಿಸಬೇಕು ಎಂಬ ಕೂಗು ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಮುಖ್ಯ ಸಚೇತಕರ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News