ಫೇಸ್‌ಬುಕ್‌ನಲ್ಲಿ ಗೆಳತಿಯ ಅಶ್ಲೀಲ ಚಿತ್ರ :ಕ್ರಿಕೆಟಿಗ ಬಂಧನ

Update: 2017-01-22 14:37 GMT

ಸಿಡ್ನಿ,ಜ.25: ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ತನ್ನ ಗೆಳತಿಯ ಕೆಲವು ಸೂಕ್ಷ್ಮಸಂವೇದಿ ಛಾಯಾಚಿತ್ರಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಬಾಂಗ್ಲಾದ ಖ್ಯಾತ ಕ್ರಿಕೆಟಿಗರ ಆರಾಫತ್ ಸನ್ನಿ ಅವರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಎಡಗೈ ಬೌಲರ್, 30 ವರ್ಷದ ಆರಾಫತ್ ಅವರನ್ನು ಅವರನ್ನು ಢಾಕಾದ ಉಪನಗರ ಆಮಿನ್‌ಬಝಾರ್ ಪ್ರದೇಶದಲ್ಲಿರುವ ಸ್ವಗೃಹದಿಂದ ಅವರನ್ನು ಬಂಧಿಸಿದರು. ಅರಾಫತ್ ಅವರ ದೀರ್ಘಕಾಲದ ಗೆಳತಿ ಎರಡು ವಾರಗಳ ಹಿಂದೆ ಈ ಬಗ್ಗೆ ದೂರು ನೀಡಿದ್ದಳು. ಬಂಧಿತ ಕ್ರಿಕೆಟಿಗನ ವಿರುದ್ಧ ಅಂತರ್ಜಾಲ ಕಾನೂನುಗಳನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆಯೆಂದು ಸ್ಥಳೀಯ ಪೊಲೀಸ್ ವರಿಷ್ಠ ಜಮಾಲುದ್ದೀನ್ ಮಿರ್ ತಿಳಿಸಿದ್ದಾರೆ.

ಸನ್ನಿ ತನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ, ಅದರಲ್ಲಿ ತಮ್ಮಿಬ್ಬರು ತೀರಾ ವೈಯಕ್ತಿಕ ಭಾವಚಿತ್ರಗಳನ್ನು ಪ್ರಸಾರ ಮಾಡಿರುವುದಾಗಿ ಅವರ ಗೆಳತಿ ದೂರಿನಲ್ಲಿ ತಿಳಿಸಿದ್ದಾರೆಂದು ಮಿರ್ ಹೇಳಿದ್ದಾರೆ.ಒಂದು ವೇಳೆ ಮೀರ್ ತಪ್ಪಿಸ್ಥರೆಂದು ದೃಢಪಟ್ಟಲ್ಲಿ ಅವರು 14 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1.26 ಲಕ್ಷ ಡಾಲರ್ ದಂಡವನ್ನು ತೆರೇಕಾದೀತೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News