ಬಿಐಟಿ , ಬಿಇಎಡಿಎಸ್ ಗ್ರಾಂಡ್ ಕ್ವೆಸ್ಟ್ ಸಮಾರೋಪ

Update: 2017-01-22 15:16 GMT

ಮಂಗಳೂರು, ಜ.22: ಪುಸ್ತಕದ ಜ್ಞಾನ ಮಾತ್ರ ಇದ್ದರೆ ಸಾಲದು. ಜೊತೆಗೆ ವ್ಯಾವಹಾರಿಕ ಜ್ಞಾನವೂ ಅತ್ಯಗತ್ಯ ಎಂದು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಟ್ರಸ್ಟಿ ಮಝರ್ ಬ್ಯಾರಿ ಹೇಳಿದ್ದಾರೆ.

 ಬಿಐಟಿ ಮತ್ತು ಬಿಇಎಡಿಎಸ್ ಗ್ರಾಂಡ್ ಕ್ವೆಸ್ಟ್ 2017 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇರಳದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದ ಫೈನಲ್ ಹಂತದಲ್ಲಿ 275 ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ. ವಿಜ್ಞಾನ ಪ್ರದರ್ಶನ ಸ್ಪರ್ಧೆಯಲ್ಲಿ 25 ಪ್ರಾಜೆಕ್ಟ್‌ಗಳು, ಪ್ರಬಂಧ ಸ್ಪರ್ಧೆಯಲ್ಲಿ 120 ವಿದ್ಯಾರ್ಥಿಗಳು, ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 60 ತಂಡಗಳು ಪಾಲ್ಗೊಂಡಿದ್ದವು ಎಂದವರು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಪ್ರೊ.ಮುಸ್ತಫಾ ಬಸ್ತಿಕೋಡಿ ಸ್ವಾಗತಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ. ಅಬ್ದುಲ್ ಕರೀಂ, ಯೋಜನೆಗಳನ್ನು ಉತ್ಪನ್ನಗಳನ್ನಾಗಿ ಮಾರ್ಪಡಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.

ಹಿರಿಯ ಸಲಹೆಗಾರ ಡಾ. ಎಸ್.ಕೆ.ರಾಯ್‌ಕರ್, ಬಿಇಎಡಿಎಸ್ ಪ್ರಾಂಶುಪಾಲ ಪ್ರೊ. ಭವಿಷ್ ಮೆಹ್ತಾ, ಕಾರ್ಯಕ್ರಮ ಸಂಯೋಜಕ ಪ್ರೊ. ಝಮೀಲ್ ಅಹ್ಮದ್, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಬಿಐಟಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ವಂದಿಸಿದರು. ಪ್ರೊ. ಮುಬೀನಾ ಜಾದೂ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅತಿಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News