ಕೈನೆಟಿಕ್‌ಗೆ ಲಾರಿ ಢಿಕ್ಕಿ: ಯುವಕ ಮೃತ್ಯು
Update: 2017-01-22 20:50 IST
ಪುತ್ತೂರು , ಜ.22 : ಕೈನೆಟಿಕ್ ಸ್ಕೂಟರ್‌ಗೆ ಲಾರಿಯೊಂದು ಢಿಕ್ಕಿಯಾಗಿ ಕೈನೆಟಿಕ್ ಸವಾರ ಯುವಕ ಮೃತಪಟ್ಟ ಘಟನೆ ಪುತ್ತೂರು ನಗರದ ದರ್ಬೆ ಎಂಬಲ್ಲಿ ಭಾನುವಾರ ನಡೆದಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಸಫ್ವಾನ್(30) ಮೃತಪಟ್ಟ ಯುವಕ.
ದರ್ಬೆ ವಿಭಜಕ ರಸ್ತೆಯಲ್ಲಿ ಸಫ್ವಾನ್ ಚಲಾಯಿಸುತ್ತಿದ್ದ ಕೈನೆಟಿಕ್‌ಗೆ ಲಾರಿ ಢಿಕ್ಕಿಯಾಗಿತ್ತು. ಈ ಸಂದರ್ಭದಲ್ಲಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಆತನನ್ನು ಪುತ್ತೂರು ನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿತ್ತು. ಅಲ್ಲಿ ರಾತ್ರಿ ವೇಳೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.