×
Ad

ಅಕ್ರಮ ಮರಳು ಸಾಗಾಟ : ಎರಡು ಲಾರಿ ವಶಕ್ಕೆ

Update: 2017-01-22 22:07 IST

ಅಂಕೋಲಾ , ಜ.22  :  ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅಕ್ರಮ ಮರಳನ್ನು ತುಂಬಿ ಸಾಗುತ್ತಿದ್ದದ ಎರಡು ಲಾರಿಯನ್ನು ತಾಲೂಕಿನ ರಾಮನಗುಳಿ ಸಮೀಪ ಜಿಲ್ಲಾ ಗುಪ್ತ ಅಪರಾಧ ತನಿಖಾ ದಳದ ಇನ್ಸ್‌ಪೆಕ್ಟರ್ ಎನ್. ಆಂಜನೇಯ ಅವರು ವಶಕ್ಕೆ ಪಡೆದು ಅಂಕೋಲಾ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

  ಎನ್.ಆಂಜನೇಯ ಅವರು ಯಲ್ಲಾಪುರ ದಿಂದ ಅಂಕೋಲಾ ಬರುತ್ತಿರುವ ಸಂದರ್ಭದಲ್ಲಿ ಎದುರಿನಿಂದ ಬರುವ ಜೀಪ್‌ನ್ನು ಗಮನಿಸಿದ ಲಾರಿ ಚಾಲಕರು ಲಾರಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪರಾರಿಯಾಗಿರುತ್ತಾರೆ. ಪೊಲೀಸರು ಈ ಲಾರಿಯನ್ನು ಬೇರೆ ವಾಹನ ಚಾಲಕರ ಸಹಾಯದಿಂದ ಅಂಕೋಲಾ ಠಾಣೆ ಎದುರಿಗೆ ನಿಲ್ಲಿಸಿದರು.

ಈ ಪ್ರಕರಣ ವನ್ನು ಪಿಐ ಬಿ.ಡಿ.ಬುರ್ಲಿ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ವೀಣಾ ಹೊನ್ನೆ ಅವರು ಲಾರಿ ಚಾಲಕ ಮತ್ತು ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಲಾರಿಯು ಹಿಲ್ಲೂರಿನ ಕಡೆಯ ವರದೆಂದು ಬಲ್ಲ ಮೂಲಗಳಿಂದ ತಿಳಿಬಂದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News