×
Ad

ನೇಷನಲ್ ಇನ್ನೋವೇಷನ್ ಚಾಲೆಂಜ್-ಟಿನೊವೇಟರ್ಸ್‌ ಗೆ ತೆರೆ :ಬೆಂಗಳೂರು ಸೈಂಟ್ ಜೋಸೆಫ್ ಪ್ರೌಢ ಶಾಲೆ ಚಾಂಪಿಯನ್

Update: 2017-01-22 22:14 IST

ಮಣಿಪಾಲ, ಜ.22: ಮಣಿಪಾಲ ವಿವಿಯು ಐಎನ್‌ಕೆ (ಇಂಕ್) ಸಂಸ್ಥೆಯ ಸಹಭಾಗಿತ್ವದೊಂದಿಗೆ ಮಣಿಪಾಲದ ಎಂಐಟಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಸ್ಪರ್ಧೆ -ಟಿನೊವೇಟರ್ಸ್‌ನ 6ನೇ ಆವೃತ್ತಿ ಯಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಬಾಲಕರ ಪ್ರೌಢ ಶಾಲೆ ಅಗ್ರಪ್ರಶಸ್ತಿ ಯೊಂದಿಗೆ ಐದು ಲಕ್ಷ ರೂ.ಗಳ ನಗದು ಬಹುಮಾನವನ್ನು ಗೆದ್ದುಕೊಂಡಿತು.

ಪ್ರಸಕ್ತ ವರ್ಷ ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಕೊಚ್ಚಿ ಮತ್ತು ಚಂಡೀಘಡ ಸೇರಿದಂತೆ ಒಟ್ಟು 10ನಗರಗಳ 9ನೇ ತರಗತಿಯಿಂದ ಪಿಯುಸಿವರೆಗಿನ 450 ಶಾಲೆಗಳ ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಸಕ್ತ ವರ್ಷ ಬೆಂಗಳೂರು, ಚೆನ್ನೆ, ಹೈದರಾಬಾದ್ , ಅಹಮದಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಕೊಚ್ಚಿ ಮತ್ತು ಚಂಡೀಘಡ ಸೇರಿದಂತೆ ಒಟ್ಟು10 ನಗರಗಳ 9ನೇ ತರಗತಿಯಿಂದ ಪಿಯುಸಿವರೆಗಿನ 450 ಶಾಲೆಗಳ ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ  ಭಾಗವಹಿಸಿದ್ದರು.

ಪ್ರಾಥಮಿಕ ಸುತ್ತಿನ ಸ್ಪರ್ಧೆಗಳ ಬಳಿಕ ಒಟ್ಟು ಹತ್ತು ತಂಡಗಳ ಪ್ರೊಜೆಕ್ಟ್‌ಗಳು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದವು. ಎಂಐಟಿಯಲ್ಲಿ ಎರಡು ದಿನಗಳ ಕಾಲ ನಡೆದ ಸ್ಪರ್ಧೆಯ ಬಳಿಕ ಈ ಎಲ್ಲಾ ಹತ್ತು ಸಂಶೋದನೆಗಳನ್ನು ವಿದ್ಯಾರ್ಥಿಗಳು ಉನ್ನತ ಮಟ್ಟದ ತೀರ್ಪುಗಾರರ ಮಂಡಳಿಯ ಎದುರು ಪ್ರದರ್ಶಿಸಿದರು. ಇವುಗಳನ್ನು ಅತ್ಯುತ್ತಮವಾದ ಮೂರು ಪ್ರೊಜೆಕ್ಟ್‌ಗಳನ್ನು ಆಯ್ಕೆಗಾರರು ಪ್ರಶಸ್ತಿಗಾಗಿ ಆಯ್ಕೆ ಮಾಡಿದರು.

9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ನಾವಿನ್ಯತೆಯ ಸವಾಲಾಗಿರುವ (ನ್ಯಾಷನಲ್ ಇನ್ನೋವೇಷನ್ ಚಾಲೆಂಜ್) ಟಿನೊವೇಟರ್ಸ್‌ ಸ್ಪರ್ಧೆ, ನಡಾವಳಿ ಮತ್ತು ಸಾಮಾಜಿಕ ವಿಜ್ಞಾನ, ಭೂಮಿ ಮತ್ತು ಪರಿಸರ ವಿಜ್ಞಾನ, ಭೌತಿಕ ವಿಜ್ಞಾನ, ಎಂಜಿನಿಯರಿಂಗ್, ಗಣಿತ, ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್) ಮತ್ತು ಜೀವನ ಶೈಲಿ ಮೊದಲಾದ ವಿಭಾಗಗಳನ್ನು ಹೊಂದಿತ್ತು.

ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಶ್ರೇಷ್ಠ ಆಲೋಚನೆಗಳನ್ನು ಅಥವಾ ಹೊಸ ವಿಧಾನಗಳನ್ನು ಬೆಳೆಸಿಕೊಳ್ಳಲು ಅಗತ್ಯವಿರುವ ಅಂತರ್‌ದೃಷ್ಟಿಯನ್ನು ಮತ್ತು ಆತ್ಮವಿಶ್ವಾಸವನ್ನು ಅಭಿವೃದ್ಧಿಪಡಿಸುವುದು. ಆಲೋಚನೆಗಳನ್ನು ಸಾಕಾರ ಗೊಳಿಸಲು ಅಗತ್ಯವಿರುವ ಪ್ರೇರಣೆ, ಬದ್ಧತೆ ಮತ್ತು ಪ್ರೋತ್ಸಾಹವನ್ನು ನೀಡುವುದು. ತಮ್ಮ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಯುವ ಪೀಳಿಗೆಗೆ ಉತ್ತೇಜನ ನೀಡುವುದು ಕಾರ್ಯಕ್ರಮದ ಉದ್ದೇಶ ಎಂದು ಇಂಕ್ ಸಂಸ್ಥೆಯ ಸಿಇಒ ಮತ್ತು ಸಂಸ್ಥಾಪಕಿ ಲಕ್ಷ್ಮಿ ಪ್ರಚೂರಿ ತಿಳಿಸಿದರು.

ಟಿನೊವೇಟರ್ಸ್‌ ಕಾರ್ಯಕ್ರಮದ ಕುರಿತು ಮಾತನಾಡಿದ ಮಣಿಪಾಲ ವಿವಿಯ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ದೇಶದ ವಿವಿಧ ಭಾಗ ಗಳಿಂದ ಅತ್ಯಂತ ಕುತೂಹಲಕಾರಿ ಹಾಗೂ ಸ್ಪೂರ್ತಿದಾಯಕ ನೋಂದಣಿಗಳು ಬಂದಿದ್ದು, ಈ ಸ್ಪರ್ಧೆಯ ಕುರಿತು ವಿದ್ಯಾರ್ಥಿ ಸಮೂಹ ತೊೀರಿದ ಆಸಕ್ತಿ ಅವಿಸ್ಮರಣೀಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News