×
Ad

ಉಡುಪಿ ನಗರಸಭಾ ಗಣರಾಜ್ಯೋತ್ಸವ ಕ್ರೀಡಾಕೂಟ ಉದ್ಘಾಟನೆ

Update: 2017-01-22 22:36 IST

ಉಡುಪಿ, ಜ.22: ಉಡುಪಿ ನಗರಸಭಾ ಗಣರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯ ವತಿಯಿಂದ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಯ ಸದಸ್ಯರು, ನೌಕರರು, ಕಾರ್ಯನಿರತ ಪತ್ರಕರ್ತರಿಗೆ ಒಂದು ದಿನದ ಕ್ರೀಡಾಕೂಟವನ್ನು ರವಿವಾರ ಬೀಡಿನಗುಡ್ಡೆಯ ಮಹಾತ್ಮಾಗಾಂಧಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

 ಕ್ರೀಡಾಕೂಟವನ್ನು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ವಹಿಸಿದ್ದರು.

ನಗರಸಭಾ ಪೌರಯುಕ್ತ ಡಿ.ಮಂಜುನಾಥಯ್ಯ, ಮೆನೇಜರ್ ವೆಂಕಟ ರಮಣ, ಸದಸ್ಯ ಶಾಂತಾರಾಮ ಸಾಲ್ವಂಕರ್, ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ ಕುಮಾರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ವಸುಮತಿ ನಾಗೇಶ್, ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ, ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಸಂಜೀವ, ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ಮೆಹಬಲ್ ಡಿಸೋಜ, ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ನಗರ ಸಭಾ ಸದಸ್ಯ ಜನಾರ್ಧನ್ ಭಂಡಾರ್ಕರ್‌ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಪೆರಂಪಳ್ಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News