26ರಿಂದ ವಸ್ತು ಪ್ರದರ್ಶನ, ಮಾರಾಟ ಮೇಳ

Update: 2017-01-22 18:41 GMT

ಮಂಗಳೂರು, ಜ.22: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಉದ್ಯಮಿಗಳು, ಸೀಶಕ್ತಿ ಗುಂಪಿನ ಸದಸ್ಯರು ಉತ್ಪಾದಿಸುವಂತಹ ವಸ್ತುಗಳ ಜಿಲ್ಲಾ ಮಟ್ಟದ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜ.26ರಿಂದ ಜ.29ರವರೆಗೆ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿದೆ.

ಅರ್ಜಿ ಸಲ್ಲಿಸಲು ಜ.23 ಕೊನೆಯ ದಿನವಾಗಿದೆ. ಆಸಕ್ತ ಮಹಿಳಾ ಉದ್ಯಮಿಗಳು, ಸ್ವ-ಸಹಾಯ ಸಂಘದ ಸದಸ್ಯರು ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಪಂ ಕಟ್ಟಡ, ಆಶೋಕನಗರ ಅಂಚೆ, ಮಂಗಳೂರು-6(ದೂ.ಸಂ.: 0824-24581473)ಗೆ ಸಲ್ಲಿಸಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News