ಆಳ್ವಾಸ್ ನಲ್ಲಿ ಸಂಖ್ಯಾಶಾಸ್ತ್ರ ವಿಭಾಗದಿಂದ ಕಾರ್ಯಾಗಾರ
ಮೂಡಬಿದಿರೆ,ಜ.23: ವಾಸ್ತವ ಜಗತ್ತು ವಿದ್ಯಾರ್ಥಿಗಳು ಗಳಿಸುವ ಅಂಕದಿಂದ ಅವಲಂಬಿತವಾಗಿರದೇ, ದಿನನಿತ್ಯದ ಜೀವನದಲ್ಲಿ ಗಳಿಸುವ ಕೌಶಲದಿಂದ ನಿರ್ಧರಿಸಲ್ಪಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ನಿವೃತ್ತ ಡೀನ್ ಪ್ರೊ. ಟಿ.ಪಿ ಎಮ್ ಪಕ್ಕಳ ತಿಳಿಸಿದರು.
ಆಳ್ವಾಸ್ ಸ್ನಾತ್ತಕೋತ್ತರ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗ, ಸೋಮವಾರ ಕಾಲೇಜಿನ ಸೆಮಿನಾರ ಹಾಲ್‌ನಲ್ಲಿ ಆಯೋಜಿಸಿದ್ದ ಆ್ಯಕ್ಚ್ವೇರಿಯಲ್ ಸ್ಟ್ಯಾಟಿಸ್ಟಿಕ್ಸ್ ಕಾರ್ಯಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ಬದುಕಿಗೆ ಬೇಕಾದ ಹಲವು ಪಾಠಗಳನ್ನು ಮನದಟ್ಟು ಮಾಡಿಕೊಂಡು, ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ಹದಗೊಳಿಸುವ ತುರ್ತು ಅನಿವಾರ್ಯವಿದೆ ಎಂದರು. ಕಲಿಕೆಯೊಂದಿಗೆ ಬೆಳವಣಿಗೆ ಎಂಬ ತತ್ವಕ್ಕೆ ಒತ್ತು ಕೊಟ್ಟು, ಜಾಗತಿಕ ಮಟ್ಟದಲ್ಲೂ ನಮ್ಮನ್ನು ನಾವು ಸಲ್ಲುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸಂಖ್ಯಾಶಾಸ್ತ್ರವು ನಮ್ಮ ಪ್ರತಿದಿನದ ಚಟುವಟಿಕೆಗಳಿಗೆ ನೇರ ಸಂಬಂಧವನ್ನು ಹೊಂದಿದ್ದು, ಆ ಕ್ಷೇತ್ರದಲ್ಲಿನ ನೈಪುಣ್ಯತೆ ಬಹಳ ಅಗತ್ಯ ಎಂದು ತಿಳಿಸಿದರು.
ನಂತರ ವಿದ್ಯಾರ್ಥಿಗಳೊಡಣೆ ಸಂವಾದ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿ ನಿಷ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಅಲೀನಾ ವಂದಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೋ ಕುರಿಯನ್, ಆಳ್ವಾಸಸ್ ಸ್ನಾತ್ತಕೋತ್ತರ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿಕ್ಷಿತಾ, ಉಪನ್ಯಾಸಕಿ ಶ್ವೇತಾ ಉಪಸ್ಥಿತರಿದ್ದರು.