×
Ad

ಎಂ.ಟೆಕ್ ಪರೀಕ್ಷೆ : ಭಟ್ಕಳದ ಫೈಝಾನ್ ವಿಟಿಯುಗೆ ಪ್ರಥಮ ರ‍್ಯಾಂಕ್

Update: 2017-01-23 18:58 IST

ಭಟ್ಕಳ,ಜ.23: ಇಲ್ಲಿನ ಆಝಾದ್ ನಗರ ನಿವಾಸಿ ಮುಹಮ್ಮದ್ ಫೈಝಾನ್ ಕೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಎಂ.ಟೆಕ್ (ಮಾಸ್ಟರ್ ಆಫ್ ಟೆಕ್ನೊಲೋಜಿ)ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿಕೊಂಡಿದ್ದು ಭಟ್ಕಳ ಹಾಗೂ ಉ.ಕ.ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇಲ್ಲಿನ ಪ್ರತಿಷ್ಠಿತ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಅಂಡ್ ಮ್ಯಾನೇಜ್‌ಮೆಂಟ್ ನಲ್ಲಿ ಬಿ.ಇ ಪದವಿಯನ್ನು ಪಡೆದಿರುವ ಇವರು  ತಮ್ಮ ಉನ್ನತ ವಿದ್ಯಾಭ್ಯಾಸವನ್ನು (ಎಂ.ಟೆಕ್)  ಬೆಂಗಳೂರಿನ ನಾಗರ್ಜುನ್ ಇಂಜಿನಿಯರಿಂಗ್ ಮತ್ತು ಟೆಕ್ನೋಲೊಜಿ ಕಾಲೇಜಿನಲ್ಲಿ ಮುಂದುವರೆಸಿದ್ದರು.  ಭಟ್ಕಳದ ಆಝಾದ್ ನಗರದ ಅತ್ಯಂತ ಬಡಕುಟಂಬದಲ್ಲಿ ಜನಿಸಿರುವ ಇವರು ತಾಯಿ ಮುಮ್ತಾಝ್ ಬೇಗಂ  ಮನೆಯಲ್ಲಿ ತಿಂಡಿ ತಿನಿಸುಗಳನ್ನು ಸಿದ್ದಪಡಿಸಿ ಮಾರಾಟ ಮಾಡಿ ತಮ್ಮ ಮಗನನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಸಿದ್ದಗೊಳಿಸಿರುವುದು ಎಲ್ಲರಿಗೂ ಮಾದರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News