ಉತ್ತಮ ಸಾಧನೆಗಾಗಿ ಭಟ್ಕಳ ಸಾರಿಗೆ ಡಿಪೋ ಅಧಿಕಾರಿಗಳಿಗೆ ಕ್ರಾಂತಿ ಸಂಘದಿಂದ ಸನ್ಮಾನ
Update: 2017-01-23 18:59 IST
ಭಟ್ಕಳ,ಜ.23: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕಗಳ ಸಮಗ್ರ ಪರಿಶೀಲನೆಯಲ್ಲಿ 2015-16ನೇ ಸಾಲಿನ ಉತ್ತಮ ಸಾಧನೆಗಾಗಿ ಭಟ್ಕಳ ಸಾರಿಗೆ ಡಿಪೋಗೆ ಪ್ರಥಮ ಬಹುಮಾನ ಲಭಿಸಿದ್ದು, ಈ ನಿಮಿತ್ತ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ ಭಟ್ಕಳ ಘಟಕದ ವತಿಯಿಂದ ಭಟ್ಕಳ ಡೀಪೋ ವ್ಯವಸ್ಥಾಪಕ ಯು.ಕೆ.ಬಾನಾವಾಳಿಕರ್ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರಾಂತಿ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ನಾಯ್ಕ, ಭಟ್ಕಳ ಡಿಪೋ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 6 ವಿಭಾಗಗಳ 49 ಡೀಪೋಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಧನೆಗೆ ಡೀಪೋದ ವ್ಯವಸ್ಥಾಪಕರು, ಅಧಿಕಾರಿಗಳು, ಚಾಲಕ, ನಿರ್ವಾಹಕರ ಪ್ರಾಮಾಣಿಕ ಪ್ರಯತ್ನವೇ ಕಾರಣವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಈರಾ ನಾಯ್ಕ, ವೆಂಕಟೇಶ ನಾಯ್ಕ, ಅಶೋಕ ನಾಯ್ಕ, ಕೆ.ಎಮ್.ಶರೀಫ್, ಜೀವನ್ ನಾಯ್ಕ, ಗಣಪತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.