ಮಲ್ಪೆಯಲ್ಲಿ ಉಚಿತ ಆರೋಗ್ಯ ಮೇಳ

Update: 2017-01-23 14:27 GMT

ಮಲ್ಪೆ, ಜ.23: ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಪ್ರಸಾದ್ ನೇತ್ರಾ ಲಯ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ), ಉಡುಪಿ ಇಂದ್ರಾಳಿ ಲಯನ್, ಲಯನೆಸ್, ಲಿಯೋ ಕ್ಲಬ್, ಮಲ್ಪೆಕೊಡವೂರು ರೋಟರಿ, ಜೆಸಿಐ ಮಣಿಪಾಲ ಹಿಲ್‌ಸಿಟಿ, ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀಶಂಕರನಾರಾಯಣ ದೇವಸ್ಥಾನ ಭಕ್ತವೃಂದ, ಮಲ್ಪೆ ನಾರಾ ಯಣಗುರು ಆಂಗ್ಲ ಮಾಧ್ಯಮ ಶಾಲೆ, ಸೌತ್ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್ ಉಡುಪಿ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಲ್ಪೆನಾರಾಯಣಗುರು ಶಾಲೆಯಲ್ಲಿ ಬೃಹತ್ ಆರೋಗ್ಯ ಮೇಳವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪ್ರೊ.ಎ.ರಾಜಾ ಆರೋಗ್ಯ ಮೇಳವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಪ್ರಸಾದ್ ನೇತ್ರಾ ಲಯದ ನೇತ್ರತಜ್ಞ ಡಾ.ಅಕ್ಷತ್, ವೈದ್ಯರಾದ ಡಾ.ಎಂ.ಎಸ್.ಉರಾಳ್, ಡಾ. ಮೋಹನದಾಸ್ ಶೆಟ್ಟಿ, ರೋಟರಿ ಅಧ್ಯಕ್ಷ ಪ್ರಭಾತ್ ಕುಮಾರ್, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಶಾಲಾ ಅಧ್ಯಕ್ಷ ದಿನೇಶ್ ಸುವರ್ಣ, ಎಸ್‌ಕೆಪಿಎ ಅಧ್ಯಕ್ಷ ವಾುನ ಪಡುಕೆರೆ ಉಪಸ್ಥಿತರಿ ದ್ದರು.

ಲಯನ್ಸ್ ಅಧ್ಯಕ್ಷ ಮಹಮ್ಮದ್ ಮೌಲಾ ಸ್ವಾಗತಿಸಿದರು. ಜೆಸಿಐ ಅಧ್ಯಕ್ಷ ಸುಭಾಸ್ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾಕರ್ ಇಂದ್ರಾಳಿ ವಂದಿಸಿದರು. ಜನಾರ್ದನ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News