ವಾಶಿಂಗ್ಟನ್‌ಗೆ ಬರಲು ಇಸ್ರೇಲ್ ಪ್ರಧಾನಿಗೆ ಟ್ರಂಪ್ ಆಹ್ವಾನ

Update: 2017-01-23 15:37 GMT

ಜೆರುಸಲೇಂ (ಇಸ್ರೇಲ್), ಜ. 23: ವಾಶಿಂಗ್ಟನ್‌ನಲ್ಲಿ ಮುಂದಿನ ತಿಂಗಳು ತನ್ನನ್ನು ಭೇಟಿಯಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ರವಿವಾರ ಆಹ್ವಾನಿಸಿದ್ದಾರೆ ಎಂದು ಎಂದು ಇಸ್ರೇಲ್ ಪ್ರಧಾನಿಯ ಕಚೇರಿ ತಿಳಿಸಿದೆ.
ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಇದು ಅವರಿಬ್ಬರ ಪ್ರಥಮ ಸಂಭಾಷಣೆಯಾಗಿದೆ.

 ‘‘ತನ್ನನ್ನು ಭೇಟಿಯಾಗಲು ಫೆಬ್ರವರಿಯಲ್ಲಿ ವಾಶಿಂಗ್ಟನ್‌ಗೆ ಬರುವಂತೆ ಅಧ್ಯಕ್ಷ ಟ್ರಂಪ್ ಪ್ರಧಾನಿ ನೆತನ್ಯಾಹು ಅವರನ್ನು ಆಹ್ವಾನಿಸಿದ್ದಾರೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ರವಿವಾರ ಟೆಲಿಫೋನ್ ಕರೆಯ ಗಂಟೆಗಳ ಮೊದಲು ಪೂರ್ವ ಜೆರುಸಲೇಂನಲ್ಲಿ ನಿರ್ಮಿಸಲಾಗಿರುವ ಇಸ್ರೇಲಿಗರ ನೂರಾರು ಮನೆಗಳಿಗೆ ಇಸ್ರೇಲ್ ಅನುಮೋದನೆ ನೀಡಿದೆ.

ಆದರೆ, ಪಶ್ಚಿಮ ದಂಡೆಯಲ್ಲಿರುವ ಬೃಹತ್ ಯಹೂದಿ ಕಾಲನಿಯನ್ನು ಏಕಪಕ್ಷೀಯವಾಗಿ ಇಸ್ರೇಲ್‌ಗೆ ಸೇರ್ಪಡೆಗೊಳಿಸುವ ಸಂಭಾವ್ಯ ಸ್ಫೋಟಕ ನಿರ್ಧಾರವನ್ನು ನೆತನ್ಯಾಹು ಮತ್ತು ಟ್ರಂಪ್ ಭೇಟಿಯವರೆಗೆ ತಡೆಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News