×
Ad

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಲಕ್ಕಿ ಕೂಪನ್ ಡ್ರಾ

Update: 2017-01-23 21:41 IST

ಮಂಗಳೂರು,ಜ.23: ಪ್ರಖ್ಯಾತ ಚಿನ್ನಾಭರಣಗಳ ಮಳಿಗೆ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಹಮ್ಮಿಕೊಂಡ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹಬ್ಬದ ಲಕ್ಕಿ ಕೂಪನ್ ಡ್ರಾವನ್ನು ನಗರದ ಫಳ್ನೀರ್‌ನ ಮಳಿಗೆಯಲ್ಲಿ ಮಂಗಳೂರು ಮೇಯರ್ ಹರಿನಾಥ್ ಸೋಮವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಕಳೆದ ಹಲವು ವರ್ಷದಿಂದ ದೇಶ-ವಿದೇಶದ ಹಲವೆಡೆ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಪ್ರಾಮಾಣಿಕ ಸೇವೆಗೆ ಹೆಸರುವಾಸಿಯಾಗಿದೆ. ಈ ಸೇವೆಯನ್ನು ಮುಂದುವರಿಸಿಕೊಂಡು ಇನ್ನಷ್ಟು ಎತ್ತರಕ್ಕೆ ಸಂಸ್ಥೆ ಬೆಳೆಯಲಿ ಎಂದು ಆಶಿಸಿದರು.

ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಝುಬೈರ್ ಎಂ.ಪಿ., ಕರುಣಾಕರನ್, ಮಂಗಳೂರು ಮಳಿಗೆಯ ಸಹ ಮುಖ್ಯಸ್ಥ ಶರತ್‌ಚಂದ್ರನ್, ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹ್ಮಾನ್ ಉಪಸ್ಥಿತರಿದ್ದರು.

ಲಕ್ಕಿ ವಿಜೇತ

ಮಂಗಳೂರು ವಿಭಾಗದ ಮೊದಲ ಲಕ್ಕಿಕೂಪನ್ ಡ್ರಾದಲ್ಲಿ ಹಾಸನದ ಜಗದೀಶ್ (ಕೂ.ಸಂ:166074) ವಿಜೇತರಾದರು.

ಆಭರಣ ಉದ್ಯಮದಲ್ಲೇ ‘ಮಲಬಾರ್ ಗೋಲ್ಡ್’ ಸಂಸ್ಥೆಯು ಜಗತ್ತಿನ ಐದು ಮಳಿಗೆಗಳಲ್ಲಿ ಒಂದೊಂದು ಹೆಸರುವಾಸಿಯಾಗಿದೆ. ಜಗತ್ತಿನ 9 ದೇಶಗಳಲ್ಲಿ 168 ಮಳಿಗೆಗಳನ್ನು ಹೊಂದಿದೆ. 2017ರ ಮಾರ್ಚ್‌ನೊಳಗೆ 20ಕ್ಕೂ ಅಧಿಕ ಮಳಿಗೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ.

ಕರ್ನಾಟಕದಲ್ಲಿ ಒಟ್ಟು 15 ಮಳಿಗೆಗಳಿದ್ದು, ಆ ಪೈಕಿ ಬೆಂಗಳೂರಿನಲ್ಲಿ 5 ಮಳಿಗೆಗಳಿವೆ. ಈ 5 ಮಳಿಗೆಯನ್ನು ‘ಎ’ ವಿಭಾಗವನ್ನಾಗಿ ಮತ್ತು ರಾಜ್ಯದ ಇತರ 10 ಮಳಿಗೆಗಳನ್ನು ‘ಬಿ’ ವಿಭಾಗವನ್ನಾಗಿ ಗುರುತಿಸಲಾಗಿದೆ. 2017ರ ಜ.13ರಿಂದ ಮಾ. 10ರವರೆಗೆ ತಲಾ 20 ಸಾವಿರ ರೂ.ಗಿಂತ ಅಧಿಕ ವೌಲ್ಯದ ಚಿನ್ನ ಮತ್ತು ವಜ್ರಾಭರಣವನ್ನು ಖರೀದಿಸುವ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಪ್ರತೀ ವಾರ ಒಬ್ಬೊಬ್ಬ ಲಕ್ಕಿ ಗ್ರಾಹಕನನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿಜೇತ ಗ್ರಾಹಕನಿಗೆ 100 ಗ್ರಾಂ ಚಿನ್ನಾಭರಣ ನೀಡಲಾಗುತ್ತದೆ. ಅಲ್ಲದೆ ಇತರ ಗಿಫ್ಟ್ ಸಾಮಗ್ರಿಗಳನ್ನು ನೀಡಲಾಗುತ್ತದೆ. ಒಟ್ಟಾರೆ 15 ಕೋ.ರೂ.ಮೊತ್ತದ ಯೋಜನೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News