ಯೆನೆಪೋಯ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ ಉದ್ಘಾಟನೆ

Update: 2017-01-23 16:18 GMT

ಉಳ್ಳಾಲ, ಜ.23: ಕ್ಯಾನ್ಸರ್ ಗಳಲ್ಲಿ ಬಾಯಿ ಕ್ಯಾನ್ಸರ್ ಮೂರನೇ ಸ್ಥಾನದಲ್ಲಿದೆ. 2,500 ಕ್ಯಾನ್ಸರ್ ರೋಗಿಗಳಲ್ಲಿ 1,200 ರಷ್ಟು ಮಂದಿ ಬಾಯಿ ಕ್ಯಾನ್ಸರಿಗೆ ತುತ್ತಾಗುತ್ತಿದ್ದಾರೆ. ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಿಂದ ಇಂತಹ ಕ್ಯಾನ್ಸರ್ ಕಂಡುಬರುತ್ತಿದ್ದು, ಇದನ್ನು ಜಾಗೃತಿ ಮೂಲಕ ತಡೆಗಟ್ಟಬಹುದು. ಇದನ್ನು ಮುಂದಿಟ್ಟುಕೊಂಡು ಯೆನೆಪೋಯ ವಿಶ್ವವಿದ್ಯಾನಿಲಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡಿದೆ ಎಂದು ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯ ಕುಮಾರ್ ಹೇಳಿದರು.

ಅವರು ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಮೌಖಿಕ ಮತ್ತು ಮೆಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸೆ ವಿಭಾಗ ದೇರಳಕಟ್ಟೆಯ ದಂತ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಯೆನ್ ಕಾಂಕ್ಲೇವ್ ಸಿಂಪೋಸಿಯಂ ಎರಡು ದಿನಗಳ ಕಾರ್ಯಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

   ಜನರಲ್ಲಿ ಬಾಯಿ ಮತ್ತು ಸ್ತನದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ತಡೆಗಟ್ಟಲು ಹೆಚ್ಚಿನ ಜಾಗೃತಿ ಅಗತ್ಯ ಆಗ ಬೇಕಿದೆ . ಈ ನಿಟ್ಟಿನಲ್ಲಿ ಯುವಸಮುದಾಯ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

        ಕಾರ್ಯಕ್ರಮದ ಸಂಯೋಜಕ ಯೆನೆಪೋಯ ದಂತ ವಿದ್ಯಾಲಯದ ಡೀನ್ ಡಾ.ಬಿ.ಹೆಚ್. ಶ್ರೀಪತಿ ರಾವ್ ಮಾತನಾಡಿ ಯೆನೆಪೋಯ ದಂತ ವೈದ್ಯಕೀಯ ಕಾಲೇಜು ಬೆಳ್ಳಿ ಹಬ್ಬದ ಪ್ರಯುಕ್ತ ಆರೋಗ್ಯದ ಕುರಿತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕರಿಗೆ ಉಪಯುಕ್ತವಾಗುವ ದೃಷ್ಟಿಯಿಂದ ಅರಿವು ಕಾರ್ಯಕ್ರಮ ನಡೆಯುತ್ತಿದೆ, ಕಾರ್ಯಗಾರಗಳಿಂದ ಜ್ಞಾನ ವೃದ್ಧಿ ಜತೆಗೆ ಪಡೆದುಕೊಂಡ ಮಾಹಿತಿಯನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಿ ಎಂದರು.

 ಈ ಸಂದರ್ಭ ಇಸ್ಲಾಮಿಕ್ ಶಿಕ್ಷಣ ಅಕಾಡೆಮಿಯ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ದಂತ ಕಾಲೇಜಿನ ಉಪಪ್ರಾಂಶುಪಾಲ ಡಾ.ಶ್ಯಾಂ ಭಟ್ ಉಪಸ್ಥಿತರಿದ್ದರು. ಅಮೆರಿಕಾದ ಡಾ.ಆಂಡ್ರ್ಯೂ ಸೈಡ್‌ಬಾಟಂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಡಾ. ವರ್ಷಾ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಡಾ, ಜಾಯ್ಸಾ ಸಿಕ್ವೇರಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News