ತೆಂಗಿನ ತೋಟಕ್ಕೆ ಬೆಂಕಿ: 25 ಮರಗಳು ಭಸ್ಮ

Update: 2017-01-23 16:22 GMT

ಕುಂದಾಪುರ, ಜ.23: ಕೋಟೇಶ್ವರ ಸಮೀಪದ ಪಡುಗೋಪಾಡಿ ಎಂಬಲ್ಲಿ ಇಂದು ಮಧ್ಯಾಹ್ನ ತೆಂಗಿನತೋಟದಲ್ಲಿ ಉಂಟಾದ ಬೆಂಕಿ ಆಕಸ್ಮಿಕದಿಂದ ಸುಮಾರು 25 ತೆಂಗಿನ ಮರಗಳು ಸುಟ್ಟ ಭಸ್ಮವಾಗಿವೆ.

ಪಡುಗೋಪಾಡಿಯ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ನಿವಾಸಿ ನಿವೃತ್ತ ಮೆಸ್ಕಾಂ ಅಧಿಕಾರಿ ಜೇಮ್ಸ್ ಲೋಬೋ ಎಂಬವರ ಮೂರು ಎಕರೆ ತೆಂಗಿನ ತೋಟದಲ್ಲಿ ಇಂದು ಮಧ್ಯಾಹ್ನ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು.

ಒಂದು ಗಂಟೆಗೆ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುಮಾರು ಎರಡು ಗಂಟೆಗಳ ನಿರಂತರ ಶ್ರಮದಿಂದ ಬೆಂಕಿ ಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂರು ಎಕರೆ ತೋಟ ದಲ್ಲಿ ಒಟ್ಟು 70 ಫಲಭರಿತ ತೆಂಗಿನ ಮರಗಳಿದ್ದು, ಇವುಗಳಲ್ಲಿ 25 ತೆಂಗಿನ ಮರಗಳು ಸುಟ್ಟು ಹೋಗಿವೆ. ಈ ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎಂದು ತಿಳಿದು ಬಂದಿದೆ. ಈ ದುರಂತದಿಂದ 10ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಗ್ನಿಶಾಮಕ ದಳದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News