ಕೊಣಾಜೆ: ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಾಗಾರ
Update: 2017-01-23 22:02 IST
ಕೊಣಾಜೆ, ಜ.23: ಕೊಣಾಜೆ ಗ್ರಾಮದ ಯುಬಿಎಂಸಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ, ಪೋಷಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಕಾರ್ಯಾಗಾರ ಹಾಗೂ ಕಿರುಚಿತ್ರ ಪ್ರದರ್ಶನ ಸೋಮವಾರ ನಡೆಯಿತು.
ಮಾಜಿ ಜಿಲ್ಲಾ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಹಾಗೂ ಜನಶಿಕ್ಷಣ ಟ್ರಸ್‌ನ ಕೃಷ್ಣ ಮೂಲ್ಯ ಅವರು ಪ್ಲಾಸ್ಟಿಕ್ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಅಚ್ಯುತಗಟ್ಟಿ, ಗುಲಾಬಿ ಶೆಟ್ಟಿಗಾರ್, ಗೀತಾ ಶೆಟ್ಟಿಗಾರ್, ಉದ್ಯಮಿ ನಾಸೀರ್ ಕೆ.ಕೆ., ನಿವೃತ ಮುಖ್ಯೋಪಾದ್ಯಾಯ ಜಯಪ್ರಸಾದ್, ಶಾಲಾ ಮುಖ್ಯೋಪಾದ್ಯಾಯಿನಿ ಡೊರತಿ ಅಮ್ಮಣ್ಣ, ಸನತ್ ಕುಮಾರ್ ರೈ ಮುಂತಾದವರು ಉಪಸ್ಥಿರಿದ್ದರು.
ಕೊಣಾಜೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಕಾರ್ಯಕ್ರಮ ನಿರೂಪಿಸಿದರು.