ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

Update: 2017-01-23 17:11 GMT

ಮಂಗಳೂರು, ಜ.23: ದ.ಕ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ 13ನೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಸೋಮವಾರ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಪಿ.ಹರಿಶೇಖರನ್ ಪೊಲೀಸರು ತಮ್ಮ ಕರ್ತವ್ಯದಲ್ಲಿ ಶ್ರದ್ಧೆ ವಹಿಸಬೇಕು. ಅನುಭವಗಳನ್ನು ಸಕಾಲಕ್ಕೆ ಬಳಸಿಕೊಂಡು ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಯಾವತ್ತೂ ಕೂಡ ತನ್ನ ಕರ್ತವ್ಯಕ್ಕೆ ಜಾತಿಯನ್ನು ತಳಕು ಹಾಕುವಂತಿಲ್ಲ. ಕರ್ತವ್ಯ ಪಾಲನೆ ಸಂದರ್ಭ ಸಹನೆ ವಹಿಸುವ ಅಗತ್ಯವಿದೆ. ಶಿಸ್ತಿಗೆ ಆದ್ಯತೆ ನೀಡಿ ಕರ್ತವ್ಯ ಮೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪಿ.ಹರಿಶೇಖರನ್ ಹೇಳಿದರು.

ದ.ಕ.ಜಿಲ್ಲಾ ಎಸ್ಪಿ ಭೂಷಣ್ ಜಿ.ಬೊರಸೆ ವರದಿ ವಾಚಿಸಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸ್ವಾಗತಿಸಿ, ವಂದಿಸಿದರು.

*72 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದು, ಆ ಪೈಕಿ 66 ಮಂದಿ ಬೆಂಗಳೂರು ನಗರ ಪಶ್ಚಿಮ ವಿಭಾಗ, 3 ಮಂದಿ ಕಲಬುರಗಿ, ಇಬ್ಬರು ಕೋಲಾರ ಮತ್ತು ಒಬ್ಬ ಬೆಂಗಳೂರು ರೈಲ್ವೆ ಸುರಕ್ಷಾ ದಳದಲ್ಲಿ ಸೇವೆ ಸಲ್ಲಿಸಲಿದ್ದಾರೆ.

*ಸಾಧಕರು: ಅತ್ಯುತ್ತಮ ಆಲ್‌ರೌಂಡರ್ ರಾಯಚೂರು ಜಿಲ್ಲೆಯ ಮುಕ್ಕಲಗುಡ್ಡ ತಾಂಡದ ರಾಜಕುಮಾರ್ ಪವಾರ್. ಒಳಾಂಗಣ ಪ್ರಥಮ-ಯಾದಗಿರಿಯ ಜಗದೀಶ್ ಬಿ.ಎನ್, ದ್ವಿತೀಯ-ರಾಜಕುಮಾರ್ ಪವಾರ್ ರಾಯಚೂರು, ತೃತೀಯ-ಯಾದಗಿರಿಯ ನಾರಾಯಣ.

ಹೊರಾಂಗಣ ಪ್ರಥಮ-ಕೊಪ್ಪಳದ ವಿಠಲ ಬಸಪ್ಪ, ದ್ವಿತೀಯ-ಬೆಳಗಾವಿಯ ಕಿರಣ್‌ಕುಮಾರ್ ಮತ್ತು ತೃತೀಯ ರಾಜಕುಮಾರ್ ಪವಾರ್,ರಾಯಚೂರ್. ಬಂದೂಕಿನ ಗುರಿ ಪ್ರಥಮ-ಲಕ್ಷ್ಮಪ್ಪ ಯಾದಗಿರಿ, ದ್ವಿತೀಯ-ದಾವಣಗೆರೆಯ ಕುಮಾರ್ ಮತ್ತು ತೃತೀಯ ಕೊಪ್ಪಳದ ವಿಠಲ ಬಸಪ್ಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News