ಹಳೆಯಂಗಡಿ : ಗಾಂಜಾ ಮಾರಾಟ - ಓರ್ವನ ಬಂಧನ

Update: 2017-01-23 17:25 GMT

ಮುಲ್ಕಿ, ಜ.23: ಹಳೆಯಂಗಡಿ ರ್ಯೆಲ್ವೆ ಕ್ರಾಸ್ ಬಳಿ ಸೋಮವಾರ ಬೆಳಗ್ಗೆ ಮುಲ್ಕಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಚ್ಚಿದ ಪೊಲೀಸರು, ಗಾಂಜಾ ಸಹಿತ ಆರೋಪಿಯನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಆರೋಪಿಯನ್ನು ಸುರತ್ಕಲ್ ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಶಂಶುದ್ದೀನ್ ಎಂದು ಗುರುತಿಸಲಾಗಿದೆ.

   ಸೋವವಾರ ಬೆಳಗ್ಗೆ ಮುಲ್ಕಿ ಪೋಲಿಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಿನ್ನಿಗೋಳಿ ಕಡೆಯಿಂದ ಬರುತ್ತಿದ್ದ ಟಿವಿಎಸ್ ಪೆಗೋ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ವಾಹನದ ಹ್ಯಾಂಡಲ್ ಹಾಗೂ ಸೀಟಿನ ಅಡಿಯ ಬಾಕ್ಸ್‌ನಲ್ಲಿ ಇರಿಸಲಾಗಿದ್ದ 2 ಗ್ರಾಂ ತೂಕದ ಸೊಪ್ಪುಮತ್ತು ಮೊಗ್ಗುಗಳಿರುವ ಗಾಂಜಾ ತುಂಬಿದ 12 ಸಣ್ಣ ಸಣ್ಣ ಪ್ಲಾಸ್ಟಿಕ್‌ಗಳು, 4 ಗ್ರಾಂ ತೂಕದ ಸಣ್ಣ ಪ್ಲಾಸ್ಟಿಕ್‌ನ ಪ್ಯಾಕೇಟ್‌ಗಳು 17 ಹಾಗೂ 6 ಗ್ರಾಂ ತೂಕದ ಸಣ್ಣ ಪಾಕೇಟ್ ಪ್ಯಾಕೇಟ್ 1 ಮತ್ತು ಗಾಂಜಾ ಮಾರಾಟ ಮಾಡಿ ಗಳಿಸಿದ್ದ 250 ರೂ.ಯನ್ನು ಪೋಲಿಸರು ದ್ವಿಚಕ್ರ ವಾಹನದ ಮಹಜರು ನಡೆಸಿ ಸ್ವಾಧೀನ ಪಡಿಸಿದ್ದು, ದ್ವಿಚಕ್ರ ವಾಹನದಲ್ಲಿದ್ದ ಕಾಟಿಪಳ್ಳ ಮೂರನೆ ಬ್ಲಾಕ್‌ನ ಪ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳಿಯ ನಿವಾಸಿ ಸಂಶುದ್ದೀನ್ (23) ನನ್ನು ವಶಕ್ಕೆ ಪಡೆದುಕೊಂಡು ಯಾವುದೇ ದಾಖಲೆ ಪತ್ರಗಳಿಲ್ಲದೆ ಆಕ್ರಮವಾಗಿ ಗಾಂಜಾ ಮಾರಾಟ ಮಾಡಿರುವುದರಿಂದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News