ಕೆಮ್ರಾಲ್ ತ್ರಿಚಕ್ರ ವಾಹನದ ಬ್ಯಾಟರಿ ಕಳವು

Update: 2017-01-23 17:27 GMT

ಮುಲ್ಕಿ,ಜ.23: ಕೆಮ್ರಾಲ್ ಗ್ರಾಮ ಪಂಚಾಯತ್ ವಠಾರದಲ್ಲಿ ಶನಿವಾರ ಸಂಜೆ ಬೀಗ ಹಾಕಿ ನಿಲ್ಲಿಸಿದ್ದ ತ್ರಿಚಕ್ರ ವಾಹನದ ಬ್ಯಾಟರಿಯನ್ನು ಕಳವು ಮಾಡಿದ ಘಟನೆ ನಡೆದಿದೆ.

  ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡುವ ತ್ರಿಚಕ್ರ ವಾಹನವನ್ನು ಶನಿವಾರ ಸಂಜೆಯ ಅವಧಿಯಲ್ಲಿ ರಮೇಶ್ ಅವರು ಕೆಮ್ರಾಲ್ ಗ್ರಾಮ ಪಂಚಾಯತ್ ಕಚೇರಿಯ ವಠಾರದಲ್ಲಿ ಬೀಗ ಹಾಕಿ ನಿಲ್ಲಿಸಿ ಹೋಗಿದ್ದರು. ಸೋಮವಾರ ಬೆಳಗ್ಗೆ ಬಂದು ವಾಹನ ಸ್ಟಾರ್ರ್ಟ್‌ ಆಗದ ಕಾರಣ ಪರಿಶೀಲಿಸಿದಾಗ ತ್ರಿಚಕ್ರ ವಾಹನದ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡು ಬಂದಿದೆ.

 ಸುಮಾರು 3,800 ರೂ. ಮೌಲ್ಯದ ಬ್ಯಾಟರಿ ಕಳವಾದ ಬಗ್ಗೆ ಪಂಚಾಯ್ ಅಭಿವೃದ್ಧಿ ಅಧಿಕಾರಿ ಮುಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News