ರಾಮಕ್ಷತ್ರಿಯ ಸೇವಾ ಸಂಘದ ವತಿಯಿಂದ ಸಂಘದ 7ನೇ ವಾರ್ಷಿಕೋತ್ಸವವು ರವಿವಾರ ಜರುಗಿತು

Update: 2017-01-23 17:31 GMT

ಮೂಡುಬಿದಿರೆ, ಜ.23: ರಾಮಕ್ಷತ್ರಿಯ ಸೇವಾ ಸಂಘ (ರಿ), ರಾಮಕ್ಷತ್ರಿಯ ಮಹಿಳಾ ವೃಂದ, ರಾಮಕ್ಷತ್ರಿಯ ಯುವ ವೃಂದ ಹಾಗೂ ರಾಮಕ್ಷತ್ರಿಯ ಭಜನಾ ಸಮಿತಿಯ ವತಿಯಿಂದ ಸಂಘದ 7ನೇ ವಾರ್ಷಿಕೋತ್ಸವವು ರವಿವಾರ ಜರುಗಿತು.

ಶ್ರೀರಾಮನಿಗೆ ದೀಪ ಬೆಳಗುವ ಮೂಲಕ ರಾಮಕ್ಷತ್ರಿಯ ಸಂಘದ ಹಿರಿಯ ಸದಸ್ಯ ನಾಗೇಶ್‌ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮಕ್ಷತ್ರಿಯ ಸಂಘ ಮೂಲ್ಕಿ-ಸುರತ್ಕಲ್ ಇದರ ಅಧ್ಯಕ್ಷ ಧರ್ಮಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ, ಮೂಡುಬಿದಿರೆ ಸಂಘದವರು ಉತ್ತಮ ಕಾರ್ಯಕ್ರಮ ನಡೆಸುತ್ತಿದ್ದಾರೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರಾಮಕ್ಷತ್ರಿಯ ಮಹಿಳಾ ವೃಂದದ ಸ್ಥಾಪಕಾಧ್ಯಕ್ಷೆ, ನಿವೃತ್ತ ಶಿಕ್ಷಕಿ, ಗೌರವಾಧ್ಯಕ್ಷೆ ಪ್ರೇಮಾ ಚಂದ್ರಶೇಖರ ರಾವ್ ಅವರನ್ನು ಸನ್ಮಾನಿಸಲಾಯಿತು.

ರಾಮಕ್ಷತ್ರಿಯ ಮಹಿಳಾ ಸಂಘ ಕಾರ್ಕಳ ಇದರ ಕಾರ್ಯದರ್ಶಿ ತಿಲಕಾ ಮಹೇಶ್ ರಾವ್ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ, ಮೈಟ್ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಹೆಬ್ಬಾಗಿಲು ಮಾತನಾಡುತ್ತಾ, ಬೇರೆ ಊರಿನ 23 ಸಂಘದವರು ಒಟ್ಟಾಗಿ ಕಾರ್ಯಕ್ರಮ ನಡೆಸಿದರೆ ಹೆಚ್ಚಿನವರ ಪರಿಚಯ, ಪ್ರತಿಭೆ ತಿಳಿದುಕೊಂಡು ಉತ್ತಮ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸಬಹುದು ಎಂದರು.
ಮಾತೃ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ರಾವ್ ಎಡನೀರು, ಮಹಿಳಾ ವೃಂದದ ಅಧ್ಯಕ್ಷೆ ಶಶಿಕಲಾ ಸುರೇಂದ್ರ, ಯುವ ಯುವ ವೃಂದದ ಕಾರ್ಯದರ್ಶಿ ಸಂದೇಶ್ ಕೆ.ರಾವ್, ಭಜನಾ ಸಮಿತಿಯ ಅಧ್ಯಕ್ಷೆ ಭವಾನಿ ಶಿವಶಂಕರ್ ಉಪಸ್ಥಿತರಿದ್ದರು.

ರಂಗೋಲಿ ಸ್ಪರ್ಧೆ ನಡೆಸಲಾಯಿತು.
ಬೆಳ್ತಂಗಡಿ, ಮುಲ್ಕಿ, ಸುರತ್ಕಲ್, ಕಾರ್ಕಳ ಮೊದಲಾದ ಊರುಗಳಿಂದ ಆಗಮಿಸಿದ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸುರೇಂದ್ರ ಅತ್ತಾವರ ಸ್ವಾಗತಿಸಿದರು. ಕಾರ್ಯದರ್ಶಿ ಸುಚೀಂದ್ರ ವಾರ್ಷಿಕ ವರದಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ನವೀನಚಂದ್ರ ಸಮ್ಮಾನಪತ್ರ, ಪ್ರತಿಭಾ ಪುರಸ್ಕಾರ ಪಟ್ಟಿಯನ್ನು ಸಂತೋಷ್, ಕ್ರೀಡಾ ಪಟ್ಟಿಯನ್ನು ಉಪಾಧ್ಯಕ್ಷೆ ಸುರೇಖಾ ಪ್ರೇಮನಾಥ ರಾವ್, ಛದ್ಮವೇಷದಲ್ಲಿ ಭಾಗವಹಿಸಿದವರ ಪಟ್ಟಿಯನ್ನು ಕಾರ್ಯದರ್ಶಿ ಶಾಂತಿಗಣೇಶ್ ವಾಚಿಸಿದರು. ಜತೆ ಕಾರ್ಯದರ್ಶಿ ಶಕುಂತಳಾ ರಾಮಚಂದ್ರ, ಕೋಶಾಧಿಕಾರಿ ಶಾರದಾ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಯುವ ವೃಂದದ ಅಧ್ಯಕ್ಷ ಸೂರ್ಯ ಆರ್.ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News