ಜ.27-29: ಕೂಳೂರಿನಲ್ಲಿ ಗೋಮಂಗಲ ಸಮಾವೇಶ-37 ವಿಶೇಷ ಗೋವಿನ ತಳಿ ಪ್ರದರ್ಶನ, ವಿಚಾರ ಸಂಕಿರಣ
ಮಂಗಳೂರು.ಜ.24: ಭಾರತದ ಗೋವುಗಳ ಸಂರಕ್ಷಣೆಯ ಹೆಸರಿನಲ್ಲಿ ಕೂಳೂರಿನಲ್ಲಿ ನಿರ್ಮಿಸಲಾದ ಬೃಹತ್ ಸಭಾಂಗಣದಲ್ಲಿ ಜ.27,28ಮತ್ತು 29ರಂದು ಗೋಮಂಗಲ ಯಾತ್ರೆಯ ಸಮಾವೇಶ ಮತ್ತು ವಿಚಾರ ಸಂಕಿರಣ ನಡೆಯಲಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಶ್ರೀರಾಘವೇಶ್ವರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ಏಳು ರಾಜ್ಯಗಳಲ್ಲಿ 82 ದಿನಗಳ ಸಂಚರಿಸಿ ಗೋವಿನ ತಳಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ ಮಂಗಲ ಗೋಯಾತ್ರೆಯ ಸಮಾರೋಪ ಸಮ್ಮೇಳನ ಜ,27,28ಮತ್ತು 29ರಂದು ಕೂಳೂರಿನಲ್ಲಿ ನಡೆಯಲಿದೆ.ಅಳಿವಿನಂಚಿನಲ್ಲಿರುವ ಗೋವು ತಳಿಗಳ ರಕ್ಷಣೆಯ ದೃಷ್ಟಿಯಿಂದ ಈ ಸಂದರ್ಭದಲ್ಲಿ ಗೋವುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಜ.27ರಂದು ಸಂಜೆ ಗೋಯಾತ್ರೆ ಪುರಪ್ರವೇಶವಾಗಲಿದ್ದು ಗೋ ಜ್ಯೋತಿಯೊಂದಿಗೆ ಮಹಾ ಮಂಗಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.ಈ ಜ.28ರಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಗೋಸಂಪತ್ತು ಎಂಬ ಬಗ್ಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಜ್ಞಾನಿಗಳ ನೇತೃತ್ವದ ವಿಚಾರ ಸಂಕಿರಣ ನಡೆಯಲಿದೆ.ಜ.29ರಂದು ಮಹಾ ಮಂಗಲ ಸಭೆ ನಡೆಯಲಿದೆ.
ಈ ಸಂದರ್ಭದಲ್ಲಿ 37 ತಳಿಗಳ ಗೋವುಗಳ ಪ್ರದರ್ಶನ ನಡೆಯಲಿದೆ.ಗೋವು ಸಾಕುವುದನ್ನು ರೈತರಲ್ಲಿ ಪ್ರೆರೇಪಿ ಸುವುದರೊಂದಿಗೆ ತಳಿ ಸಂರಕ್ಷಣೆ ಮುಖ್ಯ ಗುರಿಯಾಗಿದೆ.ಗೋಸಾಕಾಣೆ ಮಾಂಸ ಮಾರಾಟಕ್ಕೆ ಅಲ್ಲ ಎನ್ನುವುದನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು ಗೋವಿನಿಂದ ದೊರೆಯುವ ಔಷಧೀಯ ಪ್ರಯೋಜನಗಳ ಬಗ್ಗೆ ಜನಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಗುರಿ .ಕೂಳೂರಿನಲ್ಲಿ 70 ಎಕರೆ ಜಾಗದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ 2,50,000 ಚದರ ಅಡಿ ವಿಸ್ತೀರ್ಣದಲ್ಲಿ ಸಭಾಂಗಣ ನಿರ್ಮಾಣಗೊಂಡಿದೆ.1500 ಸಂತರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ವಾತ ಸಮಿತಿಯ ಅಧ್ಯಕ್ಷ ಡಾ.ವಿನಯ ಹೆಗ್ಡೆ, ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮೊದಲಾದವರು ಉಪಸ್ಥಿತರಿದರು.