×
Ad

ಕರಾವಳಿ ಕಾಲೇಜಿಗೆ ಡಿಸೈನಿಂಗ್ , ಹೋಟೇಲ್ ಮ್ಯಾನೇಜ್‌ಮೆಂಟ್ (ಬಿಎಚ್‌ಎಮ್) ನಲ್ಲಿ ರ‍್ಯಾಂಕ್ ಗಳು

Update: 2017-01-24 17:27 IST

ಮಂಗಳೂರು, ಜ. 24: ನಗರದ ಕೊಟ್ಟಾರ ಚೌಕಿ ಸಮೀಪರುವ ಪ್ರತಿಷ್ಠಿತ ಕರಾವಳಿ ಕಾಲೇಜಿಗೆ ಕಳೆದ ಎಪ್ರಿಲ್ ತಿಂಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ಮತ್ತು ಹೊಟೇಲ್ ಮ್ಯಾನೇಜ್‌ಮೆಂಟ್(ಬಿಎಚ್‌ಎಮ್) ಪದವಿ ಪರೀಕ್ಷೆಯಲ್ಲಿ 3 ರ‍್ಯಾಂಕ್ಗಳು ಲಭಿಸಿದೆ.

ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ಪದವಿಯಲ್ಲಿ ವಿಶಾಲಾಕ್ಷಿ ಆಮಲ್ ಜೆ. ಅವರು 4182 ಅಂಕಗಳೊಂದಿಗೆ ಒಂದನೆ ರ‍್ಯಾಂಕ್ ಮತ್ತು ಲಿಜಿ. ಕೆ. ಓಮಾನ್ 4077 ಅಂಕಗಳೊಂದಿಗೆ 2ನೆ ರ‍್ಯಾಂಕ್ ಗಳಿಸಿರುತ್ತಾರೆ.

ಹೋಟೇಲ್ ಮ್ಯಾನೇಜ್‌ಮೆಂಟ್(ಬಿಎಚ್‌ಎಮ್) ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಮಹೇಶ್ ಬಾಲಕೃಷ್ಣನ್ 4453 ಅಂಕಗಳೊಂದಿಗೆ 2ನೆ ರ‍್ಯಾಂಕ್ ಗಳಿಸಿದ್ದಾರೆ.

ಕರಾವಳಿ ಕಾಲೇಜು ನಿರಂತರವಾಗಿ ಎಲ್ಲಾ ಕೋರ್ಸ್‌ಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಿದ್ದು, ಅತ್ಯುತ್ತಮ ಫಲಿತಾಂಶ ಮತ್ತು ರ‍್ಯಾಂಕ್ಗಳನ್ನು ಗಳಿಸುವ ಮುಖಾಂತರ ಒಂದು ವೈಶಿಷ್ಟ್ಯಪೂರ್ಣ ಶಿಸ್ತುಬದ್ಧ ವಿದ್ಯಾಸಂಸ್ಥೆಯಾಗಿ ಬೆಳೆದಿದೆ. ಕಾಲೇಜು ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಮಾನ್ಯತೆಯ ಗೌರವದೊಂದಿಗೆ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಅತ್ಯುತ್ತಮ ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಸಾರ್ಥಕ ವೃತ್ತಿ ಜೀವನಕ್ಕೆ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿದೆ. ಭಾರತದಾದ್ಯಂತ ಮಾತ್ರವಲ್ಲದೆ ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಹೊಂದಿರುತ್ತದೆ. ಇದು ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆ, ಆಡಳಿತ ಮಂಡಳಿ, ಅಧ್ಯಾಪಕ ವೃಂದದ ಬದ್ಧತೆ ಮತ್ತು ಶಿಸ್ತಿಗೆ ಸಾಕ್ಷಿಯಾಗಿದೆ ಹಾಗೂ ಕೋರ್ಸ್ ಮುಗಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶೇ.100 ಉದ್ಯೋಗಾವಕಾಶ ದೊರಕಿರುವುದು ಕಾಲೇಜಿನ ಘನತೆಗೆ ಹಿಡಿದ ಕೈಗನ್ನಡಿಯಾಗಿದೆ.

ಕರಾವಳಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಳಪಟ್ಟ ಬಿ.ಎಸ್ಸಿ ಇಂಟೀರಿಯರ್ ಡಿಸೈನ್, ಬಿ.ಎಸ್ಸಿ ಫ್ಯಾಶನ್ ಡಿಸೈನ್, ಬಿ.ಸಿ.ಎ, ಬಿ.ಬಿ.ಎ, ಬಿ.ಕಾಂ, ಬ್ಯಾಚುಲರ್ ಇನ್ ಹೊಟೇಲ್ ಮ್ಯಾನೇಜ್‌ಮೆಂಟ್ (ಬಿ.ಎಚ್.ಎಂ), ಬಿ.ಎಸ್ಸಿ (ಎಚ್.ಎಸ್) ಮತ್ತು ಬಿಎಡ್ ಪದವಿ, ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಬಿ.ಎಸ್ಸಿ ನರ್ಸ್ಸಿಂಗ್, ಎಮ್.ಎಸ್ಸಿ. ನರ್ಸ್ಸಿಂಗ್, ಪೋಸ್ಟ್ ಬಿ.ಎಸ್ಸಿ, ನರ್ಸ್ಸಿಂಗ್, ಬಿ.ಪಿ.ಟಿ (ಫಿಝಿಯೋತೆರಫಿ) ಬಿ.ಫಾರ್ಮ, ಎಮ್ ಫಾರ್ಮ, ಫಾರ್ಮಾ ಡಿ, ಪೋಸ್ಟ್ ಬಾಕ್ಯುಲರೇಟ್ ಫಾರ್ಮ ಡಿ ಪದವಿಗಳನ್ನು ಮತ್ತು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ, ಎಮ್-ಟೆಕ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ, ಎಮ್-ಟೆಕ್ ಇಂಡಸ್ಟ್ರಿಯಲ್ ಆಟೋಮೇಷನ್ ಆ್ಯಂಡ್ ರೋಬೋಟಿಕ್ಸ್, ಎಮ್-ಟೆಕ್ ಡಿಜಿಟಲ್ ಎಲೆಕ್ಟ್ರಾನಿಕ್ಸ್, ಎಮ್-ಟೆಕ್ ಮೆನ್ ಡಿಸೈನ್ ಎಂ.ಬಿ.ಎ, ಬಿ.ಇ ಏರೋನಾಟಿಕಲ್, ಬಿ.ಇ. ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಬಿ.ಇ. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಬಿ.ಇ. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಬಿ.ಇ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಬಿ.ಇ. ಸಿಲ್ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಏರೋನಾಟಿಕಲ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಇಲೆಕ್ಟ್ರಾನಿಕ್ಸ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಮೆಕ್ಯಾನಿಕಲ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಸಿವಿಲ್, ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್ ಮತ್ತು ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಆಟೋಮೊಬೈಲ್ ಕೋರ್ಸ್‌ಗಳನ್ನು ನಡೆಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News