ಹಜ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
Update: 2017-01-24 18:15 IST
ಮಂಗಳೂರು, ಜ.24: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಳ್ಳುವವರು ಅರ್ಜಿ ಸಲ್ಲಿಸಲು ಫೆ.6ರವರೆಗೆ ಕಾಲಾವಧಿ ವಿಸ್ತರಿಸಿ ಕೇಂದ್ರ ಹಜ್ ಸಮಿತಿ ಆದೇಶ ಹೊರಡಿಸಿದೆ ಎಂದು ಮಂಗಳೂರು ಹಜ್ ನಿರ್ವಾಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಜ.24 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು . ಇದೀಗ ಆ ಅವಧಿಯನ್ನು ಫೆ.6 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.