ಹಿರಿಯರ ಕ್ರೀಡಾಕೂಟ : ಅಬ್ದುಲ್ಲತೀಫ್ ಕಾವು ರಾಜ್ಯಮಟ್ಟಕ್ಕೆ ಆಯ್ಕೆ
Update: 2017-01-24 19:16 IST
ಮಂಗಳೂರು, ಜ. 24: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ದ.ಕ. ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಜ.15ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಹಿರಿಯರ ಕ್ರೀಡಾಕೂಟ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಅಬ್ದುಲ್ಲತೀಫ್ ಕಾವು ಅವರು 5000 ಮೀಟರ್ ನಡಿಗೆಯಲ್ಲಿ ಎರಡನೆ ಸ್ಥಾನ, 800 ಮೀಟರ್ ಓಟದಲ್ಲಿ ಎರಡನೆ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ ಎರಡನೆ ಸ್ಥಾನ ಗಳಿಸಿರುತ್ತಾರೆ.
ಇವರು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ನಗರದ ಕಸಾಯಿಗಲ್ಲಿ ಫ್ರೆಂಡ್ಸ್ ಸಂಘದ ಸದಸ್ಯರಾಗಿದ್ದಾರೆ.