ರಾಜ್ಯ ಹಜ್ ಸಮಿತಿ ರಚನೆ
ಬೆಂಗಳೂರು, ಜ.24: ರಾಜ್ಯ ಸರಕಾರವು ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ರಾಜ್ಯ ಹಜ್ ಸಮಿತಿಯನ್ನು ರಚಿಸಿ ಜ.19ರಂದು ಆದೇಶ ಹೊರಡಿಸಿದೆ.
ರಾಜ್ಯ ಸದಸ್ಯ ಕೆ.ರಹ್ಮಾನ್‌ಖಾನ್, ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಶನ್‌ಬೇಗ್, ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಬಿಬಿಎಂಪಿ ಸದಸ್ಯ ಮುಹಮ್ಮದ್ ಝಮೀರ್ ಶಾ, ಮೈಸೂರು ಪಾಲಿಕೆ ಸದಸ್ಯ ಸುಹೇಲ್ ಬೇಗ್, ಶಿವಮೊಗ್ಗ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಸೈಯದ್ ವಾಹಿದ್(ಅದ್ದು).
ಬೆಂಗಳೂರಿನ ವೌಲಾನ ಮುಹಮ್ಮದ್ ಹನೀಫ್ ಅಫ್ಸರ್ ಅಝೀಝಿ, ಮಂಗಳೂರಿನ ಕೆ.ಎಂ.ಅಬೂಬಕರ್ ಸಿದ್ದೀಖ್, ದೊಡ್ಡಬಳ್ಳಾಪುರದ ವೌಲಾನ ಮೀರ್ ಶಾಯರ್ ಅಲಿ, ಬೆಂಗಳೂರಿನ ಮುಹಮ್ಮದ್ ಶಾಫಿಕ್ ಅರ್ಶದ್, ಕಲಬುರಗಿಯ ಸೈಯದ್ ಮಝರ್ ಹುಸೇನ್.
ವಿಜಯಪುರದ ಸೈಯದ್ ಮುಜ್ತಬಾ ಹುಸೇನಿ ಜಹಗೀರ್‌ದಾರ್, ಬೆಂಗಳೂರಿನ ಜೈ.ಸೈಯದ್ ಸನಾವುಲ್ಲಾ, ಬಲ್ಕೀಸ್‌ಬಾನು ಹಾಗೂ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.