‘ತೊಟ್ಟಿಲ್’ ತುಳು ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ
ಮಂಗಳೂರು, ಜ. 24: ರಂಬಾರೂಟಿ ಚಿತ್ರ ಯಶಸ್ವಿಯಾದ ಬಳಿಕ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ‘ತೊಟ್ಟಿಲ್’ ತುಳು ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಜ.22ರಂದು ಪುರಭವನದಲ್ಲಿ ನಡೆಯಿತು.
ಜಿವೈಎಸ್‌ಪಿ ಫೇಸ್ ಬುಕ್ ಗ್ರೂಪ್ ಇವರು ಪುರಭವನದಲ್ಲಿ ಆಯೋಜಿಸಿದ ಗಾಣಿಗ ಸಂಗಮ 2017 ಕಾರ್ಯಕ್ರಮದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪುಟಾಣಿಗಳಿಂದಲೇ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಸಿನಿಮಾವನ್ನು ತಾಯಿ ಸೆಂಟಿಮೆಂಟ್ ಆಧಾರ ಇಟ್ಟುಕೊಂಡು ನಿರ್ಮಿಸಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಚಿತ್ರಕ್ಕೆ ಡೋಲ್ವಿನ್ ಕೊಳಲಗಿರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಹಾಡುಗಳು ಕೇಳುಗರ ಮನ ಮುಟ್ಟುವಂತಹದ್ದು. ಸಿನಿಮಾದ ಕೆಲಸಗಳು ಪೂರ್ತಿಯಾಗಿದ್ದು, ಸೆನ್ಸಾರ್ ಅಂಗಳದ ಮುಂದೆ ಚಿತ್ರ ಬಂದು ನಿಂತಿದೆ ಸೆಂಟಿಮೆಂಟ್ ಜೊತೆ ಹಾಸ್ಯದ ಹೊನಲು ಹರಿಯಲಿದೆ ಎಂದು ಈ ಸಂದರ್ಭ ಹೇಳಿದರು.
ನಿರ್ದೇಶಕ ಪ್ರಜ್ವಲ್ ಕುಮಾರ್, ನಿರ್ಮಾಪಕರಾದ ಪ್ರಕಾಶ್ ಕಾಬೆಟ್ಟು, ರಿಚರ್ಡ್ ಡಿ ಕುನ್ಹಾ, ನಾಯಕ ನಟ ವಿಜೇತ್ ಸುವರ್ಣ, ಖಳ ನಟ ರಾಜೇಶ್ ಸ್ಕೈಲಾರ್ಕ್, ಬಾಲನಟ ಪ್ರತೀಕ್ ಶೆಟ್ಟಿ, ಸಹ ನಟರಾದ ಸಂದೇಶ್ ಕೋಟ್ಯಾನ್, ಚೈತ್ರ, ಸೂರಜ್, ಹರೀಶ್ ಶೆಟ್ಟಿ, ಸಾಹಿತ್ಯ ಬರೆದ ಕೀರ್ತನ್ ಭಂಡಾರಿ ಕುಳಾಯಿ, ದೀಪಕ್ ಎಸ್. ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅನುರಾಗ ಬಂಗೇರ ನಿರೂಪಿಸಿದರು.