×
Ad

ಬೋಗಿಗಳಿಂದ ಕಳಚಿಕೊಂಡು 2 ಕಿ.ಮೀ.ಚಲಿಸಿದ ಸೂಪರ್‌ಫಾಸ್ಟ್ ಎಕ್ಸಪ್ರೆಸ್ ರೈಲಿನ ಇಂಜಿನ್!

Update: 2017-01-24 22:08 IST

ಭುವನೇಶ್ವರ,ಜ.24: ಆನಂದ ವಿಹಾರ-ಭುವನೇಶ್ವರ್ ಸೂಪರ್ ಫಾಸ್ಟ್ ಸಾಪ್ತಾಹಿಕ ರೈಲಿನ ಪ್ರಯಾಣಿಕರು ಮಂಗಳವಾರ ಕೆಲವು ಆತಂಕದ ಘಳಿಗೆಗಳನ್ನು ಕಳೆಯುವಂತಾ ಗಿತ್ತು. ರೂರ್ಕೇಲಾ ರೈಲ್ವೆ ನಿಲ್ದಾಣದಿಂದ ನಿರ್ಗಮಿಸಿದ 10-15 ನಿಮಿಷಗಳಲ್ಲಿ ಬೋಗಿಗಳಿಂದ ಪ್ರತ್ಯೇಕಗೊಂಡ ಇಂಜಿನ್ 15 ಬೋಗಿಗಳನ್ನು ಹಿಂದಕ್ಕೇ ಬಿಟ್ಟು ಎರಡು ಕಿ.ಮೀ.ಮುಂದಕ್ಕೆ ಚಲಿಸಿತ್ತು.

ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ವಿರಾಜಪಳ್ಳಿ ಬಳಿ ಈ ವಿಲಕ್ಷಣ ಘಟನೆ ನಡೆದಿದ್ದು, ಇಂಜಿನ್ ಬೋಗಿಗಳಿಂದ ಕಳಚಿಕೊಂಡು ಎರಡು ಕಿ.ಮೀ. ದೂರ ಸಾಗಿದ ಬಳಿಕವೇ ಚಾಲಕನಿಗೆ ಈ ಪ್ರಮಾದ ಗೊತ್ತಾಗಿತ್ತು. ಅಲ್ಲಿಂದ ಆತ ಇಂಜಿನ್‌ನ್ನು ರಿವರ್ಸ್‌ನಲ್ಲಿ ಚಲಾಯಿಸಿಕೊಂಡು ಬೋಗಿಗಳಿದ್ದಲ್ಲಿಗೆ ಬಂದು ಸೇರಿದ್ದಾನೆ.

ಇಂತಹ ಸಂದರ್ಭಗಳಲ್ಲಿ ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಸಕ್ರಿಯಗೊಂಡು ಇಂಜಿನ್‌ನ್ನು ನಿಲ್ಲಿಸುತ್ತದೆ ಎಂದು ತಿಳಿಸಿದ ಹಿರಿಯ ರೈಲ್ವೆ ಅಧಿಕಾರಿಗಳು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News