×
Ad

ಕ್ರೀಡಾ ಭಾರತಿ ವಿಶೇಷ ಸಭೆ: ಗೌರವಾಧ್ಯಕ್ಷರಾಗಿ ಬಿ.ನಾಗರಾಜ ಶೆಟ್ಟಿ

Update: 2017-01-24 22:08 IST

ಮಂಗಳೂರು, ಜ. 24: ಕ್ರೀಡಾ ಭಾರತಿ ಮಂಗಳೂರು ವಲಯದ ಸಭೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಸೀತಾರಾಮ್‌ರ ಹಿರಿತನದಲ್ಲಿ ಇತ್ತೀಚೆಗೆ ನಗರದ ಸಂಘ ನಿಕೇತನದಲ್ಲಿ ಜರಗಿತು.

  ಸೀತಾರಾಮ್‌ರವರು ಮುಂದಿನ ಅವಧಿಗೆ ದ.ಕ. ಜಿಲ್ಲೆ ಮಾಜಿ ಉಸ್ತುವಾರಿ ಸಚಿವ ಬಿ.ನಾಗರಾಜ ಶೆಟ್ಟಿಯವರನ್ನು ಗೌರವಾಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.

ಉಳಿದಂತೆ ಅಧ್ಯಕ್ಷರಾಗಿ ಕಾರ್ಯಪ್ಪ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಅರಿಗ , ಕಾರ್ಯದರ್ಶಿಗಳಾಗಿ ಹರೀಶ್ ರೈ ಮತ್ತು ಕೃಷ್ಣ ಶೆಟ್ಟಿ ತಾರೆಮಾರ್, ಖಜಾಂಚಿಯಾಗಿ ಸುರೇಂದ್ರ ಶೆಣೈ, ಉಪಾಧ್ಯಕ್ಷರುಗಳಾಗಿ ಕರುಣಾಕರ ಶೆಟ್ಟಿ ಮುಡಿಪು, ಅರುಣ್‌ರಾವ್, ದಯಾನಂದ ಮಾಡ, ಕೆ.ಎಚ್.ನಾಯಕ್, ಕೃಷ್ಣ ಶೆಣೈ ಹಾಗೂ ಎ.ಪಿ.ಪ್ರಭು ಹಾಗೂ ಮಹಿಳಾ ಪ್ರಮುಖ್ ಆಗಿ ಸೇವಂತಿ ಅವರನ್ನು ಆಯ್ಕೆ ಮಾಡಲಾಯಿತು.

ವಿವಿಧ ಕ್ರೀಡಾ ಪ್ರಮುಖರನ್ನು ಸಹ ಆಯ್ಕೆ ಮಾಡಲಾಯಿತು.

ವಿಭಾಗ ಪ್ರಚಾರಕ್ ಚಂದ್ರಬಾಬು, ವಿಭಾಗ ಸಂಯೋಜಕ ಭೋಜರಾಜ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಅವಿನಾಶ್ ಶೆಟ್ಟಿ ಸ್ವಾಗತಿಸಿದರು. ಹರೀಶ್‌ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News