ಬಜ್ಪೆಯಲ್ಲಿ ಯುನಿವೆಫ್ ನಿಂದ ಪ್ರವಾದಿ ಅಭಿಯಾನ
Update: 2017-01-24 22:18 IST
ಮಂಗಳೂರು , ಜ.24 : “ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಮುಹಮ್ಮದ್(ಸ)” ಎಂಬ ಕೇಂದ್ರೀಯ ವಿಷಯದಲ್ಲಿ 2016 ರ ಡಿಸೆಂಬರ್ 16ರಿಂದ 2017 ರ ಫೆಬ್ರವರಿ 3 ರ ತನಕ ಯುನಿವೆಫ್ ಕರ್ನಾಟಕ ಆಯೋಜಿಸಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಅಭಿಯಾನದ ಪ್ರಯುಕ್ತ ಬಜ್ಪೆ ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸಭೆ ಜರುಗಿತು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು “ಶರೀಅತ್, ನಮ್ಮ ಕಾನೂನು ಪ್ರವಾದಿ (ಸ) ನಮ್ಮ ನಾಯಕ” ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿದರು.
ಸಯೀದ್ ಅಹ್ಮದ್ ಕಿರ್‌ಅತ್ ಪಠಿಸಿದರು. ಹುದೈಫ್ ಕಾರ್ಯಕ್ರಮ ನಿರೂಪಿಸಿದರು.
ಅಭಿಯಾನ ಸಂಚಾಲಕ ಸಲೀಮ್ ಮಲಾರ್ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಯುನಿವೆಫ್ ಕಾರ್ಯದರ್ಶಿ ಯು.ಕೆ.ಖಾಲಿದ್ ಮತ್ತು ಮಂಗಳೂರು ಶಾಖಾಧ್ಯಕ್ಷ ನೌಫಲ್ ಹಸನ್ ಉಪಸ್ಥಿತರಿದ್ದರು.