ಅತ್ಯುತ್ತಮ ಸೇವಾ ಪುರಸ್ಕಾರಕ್ಕೆ ಆಯ್ಕೆ
Update: 2017-01-25 00:11 IST
ಮಂಗಳೂರು, ಜ.24: ನಗರ ಪೊಲೀಸ್ ಇಲಾಖೆಯ ಇಬ್ಬರು ಹಿರಿಯ ಅಕಾರಿಗಳು ಅತ್ಯುತ್ತಮ ಸೇವಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಗಣರಾಜ್ಯೋತ್ಸವ ಸಂದರ್ಭ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಹಿಂದೆ ಲೋಕಾಯುಕ್ತ, ನಗರ ಟ್ರಾಫಿಕ್‌ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಎಸಿಪಿಯಾಗಿರುವ ಉದಯ ನಾಯಕ್ ಮತ್ತು ನಗರ ಸಿಸಿಬಿ ಇಲಾಖೆಯ ಇನ್‌ಸ್ಪೆಕ್ಟರ್ ಆಗಿದ್ದು, ಪ್ರಸ್ತುತ ಎಸಿಪಿಯಾಗಿರುವ ವೆಲೆಂಟೈನ್ ಡಿಸೋಜ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.