ಶಾಂತಿ ಅಂಗಡಿ: ನುಸುರತು ಮೀಲಾದುನ್ನಭಿ ಸಂಘದ ಪದಾಧಿಕಾರಿಗಳ ಆಯ್ಕೆ
Update: 2017-01-25 11:49 IST
ಬಂಟ್ವಾಳ, ಜ. 25: ಶಾಂತಿ ಅಂಗಡಿ ನುಸುರತು ಮೀಲಾದುನ್ನಭಿ ಸಂಘ ಇದರ ವಾರ್ಷಿಕ ಮಹಾಸಭೆಯು ಮುಹಮ್ಮದ್ ಮಝಲ್‌ರವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಜರಗಿತು. ಸಭೆಯಲ್ಲಿ 2017-18ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಹಮೀದ್ ಪಲ್ಲ, ಅಧ್ಯಕ್ಷರಾಗಿ ಅಬೂಬಕ್ಕರ್ ಕರಾವಳಿ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಕೈಕಂಬ, ಅಶ್ರಫ್ ಅಚ್ಚು, ಕಾರ್ಯದರ್ಶಿಯಾಗಿ ಆದಂ ಪಲ್ಲ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಎಸ್., ಹಬೀಬುಲ್ಲ ಕೈಕಂಬ, ಕೋಶಾಧಿಕಾರಿಯಾಗಿ ಹನೀಫ್ ಎಸ್. ಶಾಂತಿ ಅಂಗಡಿ, ಲೆಕ್ಕ ಪರಿಶೋಧಕರಾಗಿ ಇಸ್ಮಾಯೀಲ್ ಪಲ್ಲ, ಸಂಘಟನಾ ಕಾರ್ಯದರ್ಶಿಯಾಗಿ ಸಮದ್ ಕೈಕಂಬ ಹಾಗೂ 11 ಮಂದಿ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಸಂಘದ ಗೌರವಾಧ್ಯಕ್ಷ ಹಮೀದ್ ಪಲ್ಲ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಎಸ್.ಕೆ.ಆದಂ ಧನ್ಯವಾದಗೈದರು. ಕಾರ್ಯದರ್ಶಿ ಇಸ್ಮಾಯೀಲ್ ಪಲ್ಲ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು